ಭಾರತ – ಅಫಘಾನಿಸ್ತಾನ ಪಂದ್ಯದಲ್ಲಿ ಗ್ಯಾಲರಿಯಲ್ಲಿ ಹೊಡೆದಾಟ
ಮೈದಾನದಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಭಾರತದ ಕ್ರಿಕೆಟ್ ಅಭಿಮಾನಿಗಳು (  ) ಮಾತ್ರ ಹೊಡೆದಾಡಿಕೊಂಡಿದ್ದಾರೆ. ಭಾರತ-ಅಫಘಾನಿಸ್ತಾನ ಪಂದ್ಯದ ವೇಳೆ ಭಾರತದ ಕ್ರಿಕೆಟ್ ಅಭಿಮಾನಿಗಳ ಮಧ್ಯೆ ಯೇ ಜಗಳ ನಡೆದಿದೆ. ಕೆಲವರು ಭಾರತ ಕ್ರಿಕೆಟ್ ತಂಡದ ಜೆರ್ಸಿ ತೊಟ್ಟಿದ್ದು, ಇನ್ನೂ ಕೆಲವರು ಸಾಮಾನ್ಯ ಉಡುಪಿನಲ್ಲಿದ್ದಾರೆ. ಎರಡು ಗುಂಪುಗಳ ಮಧ್ಯೆ ಮೊದಲು ವಾಗ್ವಾದ ಆರಂಭವಾಗಿದೆ.
ಇದಾದ ಬಳಿಕ ಕೈ ಕೈ ಮಿಲಾಯಿಸಿಕೊಳ್ಳುವಷ್ಟರ ಮಟ್ಟಿಗೆ ಜಗಳ ತಾರಕಕ್ಕೇರಿದೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಿಂದ ಟೀಕೆಗಳು ವ್ಯಕ್ತವಾಗಿವೆ.