ಟಾಸ್​ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್
ಕೋಲ್ಕತ್ತಾ:ಕ್ರಿಕೆಟ್​ ವಿಶ್ವಕಪ್​ ಟೂರ್ನಿಯ 31ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟಾಸ್​ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ದು ಕೊಂಡಿದೆ.
ಇತ್ತೀಚಿನ ವರದಿ ಪ್ರಕಾರ, ಬಾಂಗ್ಲಾದೇಶ ತಂಡ ಮೂರು ವಿಕೆಡ್ ಕಳೆದುಕೊಂಡು 81 ರನ್‌ ಗಳಿಸಿದೆ.
ಪಾಕಿಸ್ತಾನ ಇದುವರೆಗೆ ಟೂರ್ನಿಯಲ್ಲಿ ನೀರಸ ಪ್ರದರ್ಶನ ನೀಡಿದೆ. ಒಟ್ಟು 6 ಪಂದ್ಯಗಳನ್ನಾಡಿ ನಾಲ್ಕರಲ್ಲಿ ಸೋತಿದೆ. ಎರಡು ಮಾತ್ರ ಗೆದ್ದು ನಾಲ್ಕು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಈ ಪಂದ್ಯವನ್ನು ಗೆದ್ದರೆ ಆರು ಅಂಕಗಳೊಂದಿಗೆ ಅಫ್ಘಾನಿಸ್ತಾನ ತಂಡವನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರುವ ಯೋಚನೆಯಲ್ಲಿ ಪಾಕ್​ ತಂಡವಿದೆ.
ಇಂದಿನ ಪಂದ್ಯಕ್ಕೆ ಪಾಕಿಸ್ತಾನದಲ್ಲಿ ಮೂರು ಬದಲಾವಣೆಗಳು ಆಗಿವೆ. ಇಮಾಮ್ ಉಲ್​ ಹಕ್​, ಶಾದಾಬ್ ಮತ್ತು ಮೊಹಮ್ಮದ್ ನವಾಜ್ ಹೊರಗುಳಿದಿದ್ದು, ಫಖರ್ ಜಮಾನ್, ಅಘಾ ಸಲ್ಮಾನ್ ಹಾಗೂ ಉಸಾಮಾ ಮಿರ್ ಸ್ಥಾನ ಪಡೆದಿದ್ದಾರೆ.