ಅದ್ಧೂರಿಯಾಗಿ ದೀಪಾವಳಿ ಹಬ್ಬ ಆಚರಿಸಿದ ಟೀಂ ಇಂಡಿಯಾ
ಬೆಂಗಳೂರು:ವಿಶ್ವಕಪ್​ನ ಲೀಗ್ ಹಂತದ ಕೊನೆ ಪಂದ್ಯಾಟಕ್ಕೆ ಬೆಂಗಳೂರಿಗೆ ಬಂದಿಳಿದಿರುವ ಭಾರತ ತಂಡದ ಆಟಗಾರರು ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು.
ಭಾರತವು ಲೀಗ್ ಹಂತದ 8 ಪಂದ್ಯಗಳಲ್ಲಿ ಗೆದ್ದು ಬೀಗಿದ್ದು, ಸೆಮಿಫೈನಲ್​ ಸೆಣಸಾಟಕ್ಕೆ ಸಜ್ಜಾಗಿದೆ.
ಇದಕ್ಕೂ ಮುನ್ನ ಬೆಂಗಳೂರಿನ ಖಾಸಗಿ ಹೋಟೆಲ್​ವೊಂದರಲ್ಲಿ ಟೀಮ್​ ಇಂಡಿಯಾ ಆಟಗಾರರು ಸಂಭ್ರಮದಿಂದ ದೀಪಾವಳಿಯನ್ನು ಆಚರಿಸಿದರು. ಈ ವೇಳೆ ಕುಟುಂಬಸ್ಥರು, ಭಾರತ ತಂಡದ ಸದಸ್ಯರು ದೀಪಾವಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ದೀಪಾವಳಿ ಆಚರಣೆಯ ಫೋಟೋವನ್ನು ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಕೆ ಎಲ್​ ರಾಹುಲ್​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಭಾರತ ತಂಡದ ಆಟಗಾರರು ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ್ದಾರೆ.