ನೆದರಲ್ಯಾಂಡ್ ತಂಡಕ್ಕೆ ಗೆಲ್ಲಲು 411 ರನ್ನುಗಳ ಗುರಿ
ಬೆಂಗಳೂರು:ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಟೀಮ್ ಇಂಡಿಯಾ ನೆದರಲ್ಯಾಂಡ್ ತಂಡಕ್ಕೆ ಗೆಲ್ಲಲು 411 ರನ್ನುಗಳ ಅಸಾಧ್ಯ ಗುರಿ ನೀಡಿದೆ. ಇಂದಿನ ಭಾರತದ ಇನ್ನಿಂಗ್ಸ್ ನಲ್ಲಿ ಮೂರು ಅರ್ಧಶತಕ ಹಾಗೂ ಎರಡು ಶತಕ ದಾಖಲಾದವು.
ಡಚ್ಚರ ವಿರುದ್ಧದ ಪಂದ್ಯದಲ್ಲಿ ನಾಯಕ ರೋಹಿತ್​ ಶರ್ಮಾ ಅರ್ಧಶತಕ ಗಳಿಸುವ ಮೂಲಕ ವಿಶ್ವಕಪ್​ನಲ್ಲಿ 500 ರನ್​ಗಳ ಗಡಿ ದಾಟಿದ್ದಾರೆ. ವಿಶ್ವಕಪ್​ನಲ್ಲಿ ನಾಯಕರಾಗಿ 500 ಗಡಿ ದಾಟಿದ ಮೊದಲ ನಾಯಕ ಎಂಬ ಖ್ಯಾತಿ ಗಳಿಸಿ ದ್ದಾರೆ.
ಸಚಿನ್​ ದಾಖಲೆ ಸರಿಗಟ್ಟಿದ ಶರ್ಮಾ:ವಿಶ್ವಕಪ್​ನಲ್ಲಿ ಎರಡು ಬಾರಿ 500ಕ್ಕೂ ಹೆಚ್ಚು ರನ್​ ಗಳಿಸಿದ ದಾಖಲೆಯಲ್ಲಿ ರೋಹಿತ್​ ಸಚಿನ್​ ಅವರನ್ನು ಸಮ ಮಾಡಿದ್ದಾರೆ. ಸಚಿನ್​ ತೆಂಡೂಲ್ಕರ್​ 1996 ಮತ್ತು 2003ರ ವಿಶ್ವಕಪ್​ನಲ್ಲಿ 500ಕ್ಕೂ ಹೆಚ್ಚಿನ ರನ್​ ಕಲೆಹಾಕಿದ್ದರು. ಆರಂಭಿಕರಾಗಿ 14,000 ರನ್ ಗಡಿಯನ್ನು ರೋಹಿತ್​ ಶರ್ಮಾ ಪೂರೈಸಿದ್ದಾರೆ.