 : ಹೊಸ ಬಾಯ್ ಫ್ರೆಂಡ್ ಜತೆ ಕಾಣಿಸಿಕೊಂಡ ಹಾರ್ದಿಕ್‌ ಪಾಂಡ್ಯ ಮಾಜಿ ಪತ್ನಿ ನತಾಶಾ
ಗೋವಾ:ಜುಲೈನಲ್ಲಿ ಕ್ರಿಕೆಟಿಗ ಹಾರ್ದಿಕ್​ ಪಾಂಡ್ಯ( ) ಅವರು ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್( ) ಅವರಿಗೆ ವಿಚ್ಛೇದನ(- ) ನೀಡುವ ಮೂಲಕ 4 ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದರು. ವಿಚ್ಛೇದನದ ಬಳಿಕ ಹಾರ್ದಿಕ್‌ ಬಾಲಿವುಡ್​ನ ಖ್ಯಾತ ನಟಿ ಅನನ್ಯ ಪಾಂಡೆ( ), ಬ್ರಿಟಿಷ್​ ಗಾಯಕಿ ಜಾಸ್ಮಿನ್​ ವಾಲಿಯಾ( ) ಜತೆ ಡೇಟಿಂಗ್​(     ) ಮಾಡುತ್ತಿದ್ದಾರೆ ಎನ್ನಲಾಗಿತ್ತು. ಇದೀಗ ನತಾಶಾ ಅವರು ದಿಶಾ ಪಟಾನಿ ಬಾಯ್ ಫ್ರೆಂಡ್ ಎನ್ನಲಾಗಿರುವ ಅಲೆಕ್ಸಾಂಡರ್ ಅಲೆಕ್ಸ್( ) ಜತೆ ಗೋವಾದಲ್ಲಿ ಜಾಲಿ ಮೂಡ್‌ನಲ್ಲಿರುವ ವಿಡಿಯೊಗಳು ವೈರಲ್‌( ) ಆಗಿದೆ. ಈ ಜೋಡಿಯನ್ನು ಕಂಡ ನೆಟ್ಟಿಗರು ಇವರಿಬ್ಬರು ಡೇಟಿಂಗ್‌ ನಡೆಸುತ್ತಿದ್ದು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂದಿದ್ದಾರೆ.
ಅಲೆಕ್ಸಾಂಡರ್​ ಅಲೆಕ್ಸ್ ಗೋವಾದಲ್ಲಿ ನತಾಶಾ ಜತೆ ಸಮಯ ಕಳೆಯುತ್ತಿರುವ ವಿಡಿಯೊ ಮತ್ತು ಫೋಟೊಗಳನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜಿಮ್‌ನಲ್ಲಿ ಮತ್ತು ಈಜುಕೊಳದಲ್ಲಿ ಇಬ್ಬರೂ ಜತೆಯಾಗಿ ಮೋಜು ಮಸ್ತಿ ಮಾಡುತ್ತಿರುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಪಾಂಡ್ಯ ಅವರಿಂದ ವಿಚ್ಛೇದನದ ಪಡೆಯುವ ಮುನ್ನವೇ ನತಾಶ ಲಂಡನ್‌ನಲ್ಲಿ ಅಲೆಕ್ಸಾಂಡರ್​ ಅಲೆಕ್ಸ್ ಜತೆ ಸುತ್ತಾಡುತ್ತಿರುವ ವಿಡಿಯೊಗಳು ಕೂಡ ವೈರಲ್‌ ಆಗಿತ್ತು.
       (@)
ಹಾರ್ದಿಕ್​ ಮತ್ತು ನತಾಶಾ ನಡುವಿನ ಬ್ರೇಕಪ್​ಗೆ ಸಂವಹನ ಕೊರತೆಯೇ ಮುಖ್ಯ ಕಾರಣ ಎಂದು ಆಪ್ತ ಮೂಲಗಳು ಮಾಹಿತಿ ನೀಡಿತ್ತು. ಇಬ್ಬರ ನಡುವಿನ ಮನಸ್ತಾಪ ಮತ್ತು ಜಗಳಕ್ಕೆ ಪರಿಹಾರ ಕಂಡುಕೊಳ್ಳುವ ತಾಳ್ಮೆ ಇಬ್ಬರಲ್ಲೂ ಇರಲಿಲ್ಲ. ಹೀಗಾಗಿ ಮನಸ್ತಾಪ ದೊಡ್ಡದಾಗಿ ಡಿವೋರ್ಸ್​ಗೆ ಕಾರಣವಾಯಿತು ಎಂದು ಆಪ್ತ ಮೂಲಗಳು ತಿಳಿಸಿತ್ತು.
ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್‌ ಸಂಪ್ರದಾಯದಂತೆ ಹಾರ್ದಿಕ್‌ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್‌ ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇದಕ್ಕೂ ಮುನ್ನ ಈ ಜೋಡಿ 2020ರಲ್ಲೇ ರಿಜಿಸ್ಟರ್‌ ರೀತಿಯಲ್ಲಿ ವಿವಾಹವಾಗಿದ್ದರು.
ಇದನ್ನೂ ಓದಿ : ಟೆಸ್ಟ್​ ಕ್ರಿಕೆಟ್​ಗೆ ಹಾರ್ದಿಕ್​ ಪಾಂಡ್ಯ ಪುನರಾಗಮನ?
ವಿಚ್ಛೇದನ ಪಡೆದರೂ ಕೂಡ ಇಬ್ಬರೂ ಪುತ್ರ ಅಗಸ್ತ್ಯನನ್ನು() ಸಹ-ಪೋಷಕರಾಗಿ ನೋಡಿಕೊಳ್ಳುತ್ತೇವೆ. ಅವನಿಗೆ ಯಾವುದೇ ಕಾರಣಕ್ಕೂ ಯಾವ ಕೊರತೆಯೂ ಆಗದಂತೆ ನಾವಿಬ್ಬರೂ ಸಮನಾಗಿ ಅವನ ಜವಾಬ್ದಾರಿ ಹಂಚಿಕೊಳ್ಳಲಿದ್ದೇವೆ ಎಂದು ಈಗಾಗಲೇ ಪಾಂಡ್ಯ ಮತ್ತು ನತಾಶ ಜಂಟಿ ಹೇಳಿಯಲ್ಲಿ ಖಚಿತಪಡಿಸಿದ್ದರು. ಸದ್ಯ ಅಗಸ್ತ್ಯ ತಂದೆ ಹಾರ್ದಿಕ್‌ ಜತೆಗಿದ್ದರೆ. ಕೆಲ ದಿನಗಳ ಹಿಂದಷ್ಟೇ ಪಾಂಡ್ಯ ಮಗನ ಜತೆಗಿರುವ ವಿಡಿಯೊವನ್ನು ಸಾಮಾಜಿಕ ಜಾಲಣದಲ್ಲಿ ಹಂಚಿಕೊಂಡಿದ್ದರು.