ಡಬ್ಲ್ಯುಪಿಎಲ್: ಗುಜರಾತ್ ಜೈಂಟ್ಸ್ ತಂಡಕ್ಕೆ ಬೆತ್ ಮೂನಿ ನಾಯಕಿ
ಮುಂಬೈ:ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಎರಡನೇ ಆವೃತ್ತಿಗೆ ಅದಾನಿ ಸ್ಪೋರ್ಟ್ಸ್‌ಲೈನ್ ಒಡೆತನದ ಗುಜರಾತ್ ಜೈಂಟ್ಸ್ ಫ್ರಾಂಚೈಸಿಯು ತಮ್ಮ ತಂಡಕ್ಕೆ ಹೊಸ ನಾಯಕಿಯನ್ನಾಗಿ ಬೆತ್ ಮೂನಿ ಅವರನ್ನು ನೇಮಿಸಿದೆ.
ಆಸ್ಟ್ರೇಲಿಯಾ ಮಹಿಳಾ ತಂಡದ ಬ್ಯಾಟರ್ ಬೆತ್ ಮೂನಿ ಗುಜರಾತ್ ಜೈಂಟ್ಸ್ ತಂಡದ ನಾಯಕತ್ವ ವಹಿಸಲಿದ್ದಾರೆ, ಭಾರತದ ಆಲ್‌ರೌಂಡರ್ ಸ್ನೇಹ್ ರಾಣಾ ಉಪನಾಯಕಿಯಾಗಿರುತ್ತಾರೆ ಎಂದು ಘೋಷಿಸಿದೆ.
ಗುಜರಾತ್ ಜೈಂಟ್ಸ್ ಮುಖ್ಯ ಕೋಚ್ ಮೈಕೆಲ್ ಕ್ಲಿಂಗರ್, ಮೆಂಟರ್ ಮತ್ತು ಸಲಹೆಗಾರ್ತಿ ಮಿಥಾಲಿ ರಾಜ್ ಮತ್ತು ಸಹಾಯಕ ಕೋಚ್ ನೂಶಿನ್ ಅಲ್ ಖದೀರ್ ಅವರೊಂದಿಗೆ ಬೆತ್ ಮೂನಿ ನಾಯಕತ್ವದ ಗುಂಪಿನ ಭಾಗವಾಗಿರುತ್ತಾರೆ.
ಬೆತ್ ಮೂನಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರು.
ಡಿಸೆಂಬರ್ 2017ರಲ್ಲಿ ಬೆತ್ ಮೂನಿ ಆರಂಭಿಕ ಐಸಿಸಿ ಟಿ20 ವರ್ಷದ ಆಟಗಾರ್ತಿ ಮತ್ತು ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗಳನ್ನು ಗೆದ್ದರು.
ಬೆತ್ ಮೂನಿ ಅವರ 24 ಅರ್ಧಶತಕಗಳು ಟಿ20 ಕ್ರಿಕೆಟ್‌ನಲ್ಲಿ ಮಹಿಳಾ ಬ್ಯಾಟರ್‌ನಿಂದ ಎರಡನೇ ಅತಿ ಹೆಚ್ಚು ಅರ್ಧಶತಕವಾಗಿದೆ. ಅವರು ಕ್ರಿಕೆಟ್‌ನ ಚುಟುಕು ಸ್ವರೂಪದಲ್ಲಿ 2,000 ರನ್‌ಗಳನ್ನು ತಲುಪಿದ ಮಹಿಳಾ ಕ್ರಿಕೆಟಿಗರಾಗಿದ್ದರು.
ಮಹಿಳಾ ಪ್ರೀಮಿಯರ್ ಲೀಗ್ ಸೀಸನ್ 1ರಲ್ಲಿ ಬೆತ್ ಮೂನಿಯ ಗಾಯದ ಬಳಿಕ ಅವರು ಗುಜರಾತ್ ಜೈಂಟ್ಸ್ ತಂಡದ ನಾಯಕಿ ಎಂದು ಹೆಸರಿಸಲ್ಪಟ್ಟರು ಮತ್ತು 7 ಇನ್ನಿಂಗ್ಸ್‌ಗಳಲ್ಲಿ 6 ವಿಕೆಟ್‌ಗಳನ್ನು ಪಡೆದರು.
ಗುಜರಾತ್ ಜೈಂಟ್ಸ್ ಫೆ.25ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.