ಆರ್.ಅಶ್ವಿನ್​ ಎಡವಟ್ಟು: ಟೀಂ ಇಂಡಿಯಾಗೆ ಪೆನಾಲ್ಟಿ, ಇಂಗ್ಲೆಂಡ್​ಗೆ ಲಾಭ..!
ರಾಜ್​ಕೋಟ್​:ಸೌರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್​ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್​ ನಡುವಿನ ಮೂರನೇ ಟೆಸ್ಟ್​ ಪಂದ್ಯ ದಲ್ಲಿ ಆರ್. ಅಶ್ವಿನ್​ ಮಾಡಿದ ಎಡವಟ್ಟಿನಿಂದ ಟೀಂ ಇಂಡಿಯಾಗೆ ಪೆನಾಲ್ಟಿ ವಿಧಿಸಲಾಗಿದ್ದು, ಇಂಗ್ಲೆಂಡ್​ಗೆ ಇದರ ಲಾಭವೆತ್ತಿದೆ.
ಟೀಂ ಇಂಡಿಯಾದ ಇನ್ನಿಂಗ್ಸ್​ನ 102ನೇ ಓವರ್​ನಲ್ಲಿ ಬ್ಯಾಟಿಂಗ್​ ಮಾಡುವ ವೇಳೆ ರೆಹಾನ್​ ಅಹ್ಮದ್​ ಎಸೆದ ಈ ಓವರ್​ನಲ್ಲಿ ಅಶ್ವಿನ್ ಒಂದು ರನ್ ಗಳಿಸಿ ದರು. ಈ ಸಂದರ್ಭ ಅಶ್ವಿನ್ ಪಿಚ್‌ನ ಮಧ್ಯದಲ್ಲಿ ಓಡಿರುವುದು ಕಂಡು ಬಂದಿದ್ದು, ಇದರಿಂದಾಗಿ ಭಾರತ ತಂಡ ಇಂಗ್ಲೆಂಡ್​ಗೆ 5 ರನ್‌ಗಳನ್ನು ಬಿಟ್ಟು ಕೊಡಬೇಕಾಯಿತು.
ನಿಯಮಗಳ ಪ್ರಕಾರ, ಪಿಚ್‌ನ ಮಧ್ಯದಲ್ಲಿ ಓಡುವಂತಿಲ್ಲ. ಇದರಿಂದಾಗಿ ಪಿಚ್ ಹಾಳಾಗುತ್ತದೆ. ಮೊದಲ ದಿನ ರವೀಂದ್ರ ಜಡೇಜಾ ಕೂಡ ಇದೇ ರೀತಿಯ ತಪ್ಪು ಮಾಡಿದ್ದರು. ಆಗ ಅಂಪೈರ್ ಜಡೇಜಾಗೆ ಎಚ್ಚರಿಕೆ ನೀಡಿದ್ದರು. ಆ ಬಳಿಕ ಅಶ್ವಿನ್ ಮಾಡಿದ ಅದೇ ತಪ್ಪಿನಿಂದಾಗಿ ಅಂಪೈರ್ 5 ರನ್​​ಗಳ ದಂಡ ವಿಧಿಸಿದ್ದಾರೆ.
ಅಶ್ವಿನ್​ ಮಾಡಿದ ಎಡವಟ್ಟಿನಿಂದಾಗಿ ರೋಹಿತ್​ ಶರ್ಮಾ ಒಂದು ಕ್ಷಣ ತಾಳ್ಮೆ ಕಳೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.