ಅರ್ಧಶತಕವಿಲ್ಲದೇ 1500 ರನ್ ಕಲೆ ಹಾಕಿದ ನಾಥನ್ ಲಿಯಾನ್
ವೆಲ್ಲಿಂಗ್ಟನ್​ನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಪಂದ್ಯದ ಮೂಲಕ ಆಸ್ಟ್ರೇಲಿಯಾ ಸ್ಪಿನ್ನರ್ ನಾಥನ್ ಲಿಯಾನ್ ( ) ವಿಶೇಷ ವಿಶ್ವ ದಾಖಲೆ ಬರೆದಿದ್ದಾರೆ.
ಈ 46 ರನ್​ಗಳೊಂದಿಗೆ ನಾಥನ್ ಲಿಯಾನ್ ಟೆಸ್ಟ್ ಕ್ರಿಕೆಟ್​ನಲ್ಲಿ 1501 ರನ್ ಕಲೆ ಹಾಕಿದ್ದಾರೆ. ಇದರೊಂದಿಗೆ ಟೆಸ್ಟ್ ಇತಿಹಾಸದಲ್ಲೇ ಅರ್ಧಶತಕ ಬಾರಿಸದೇ 1500+ ರನ್ ಕಲೆಹಾಕಿದ ವಿಶ್ವದ ಮೊದಲ ಆಟಗಾರ ಎಂಬ ವಿಶ್ವ ದಾಖಲೆ ಲಿಯಾನ್ ಪಾಲಾಗಿದೆ.
ಆಸ್ಟ್ರೇಲಿಯಾ ಪರ 162 ಟೆಸ್ಟ್ ಇನಿಂಗ್ಸ್ ಆಡಿರುವ ನಾಥನ್ ಲಿಯಾನ್ ಒಂದೇ ಒಂದು ಅರ್ಧಶತಕ ಬಾರಿಸಿಲ್ಲ. ಇನಿಂಗ್ಸ್​ವೊಂದರಲ್ಲಿ 47 ರನ್ ಬಾರಿಸಿದ್ದು ಅವರ ಗರಿಸ್ಠ ಟೆಸ್ಟ್ ಸ್ಕೋರ್. ಇದಾಗ್ಯೂ ಅವರು 1501 ರನ್ ಕಲೆಕಿದ್ದಾರೆ.
ಟೆಸ್ಟ್ ಕ್ರಿಕೆಟ್​ನಲ್ಲಿ ನಾಥನ್ ಲಿಯಾನ್ ಅಲ್ಲದೆ, ವೆಸ್ಟ್ ಇಂಡೀಸ್​ನ ಕೆಮರ್ ರೋಚ್ (1174) ಮತ್ತು ಪಾಕಿಸ್ತಾನದ ವಾಖರ್ ಯೂನಿಸ್ (1010) ಮಾತ್ರ ಟೆಸ್ಟ್ ಕ್ರಿಕೆಟ್​ನಲ್ಲಿ ಅರ್ಧಶತಕ ಬಾರಿಸದೇ ಸಾವಿರಕ್ಕೂ ಅಧಿಕ ರನ್ ಕಲೆ ಹಾಕಿದ್ದಾರೆ.