ರಾಯಲ್‌ ಚಾಲೆಂಜರ್‌ ಬೆಂಗಳೂರು ಬ್ಯಾಟಿಂಗ್‌ ಆಯ್ಕೆ
ಹೈದರಾಬಾದ್‌:ಎದುರಾಳಿಗಳ ಬೌಲಿಂಗ್‌ ಅನ್ನು ನಿರ್ದಯವಾಗಿ ದಂಡಿಸುತ್ತಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡ, ಅಂಕಪಟ್ಟಿಯ ತಳದಲ್ಲಿರುವ ರಾಯಲ್‌ ಚಾಲೆಂಜರ್‌ ಬೆಂಗಳೂರು ತಂಡಗಳು ಗುರುವಾರ ಐಪಿಎಲ್‌ ಪಂದ್ಯದಲ್ಲಿ ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಬೆಂಗಳೂರು ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಹೈದರಾಬಾದ್ ಬೌಲಿಂಗ್‌ ಮಾಡುತ್ತಿದೆ.
ಐಪಿಎಲ್‌ನ ಈ ಆವೃತ್ತಿಯೊಂದರಲ್ಲೇ ಹೈದರಾಬಾದ್ ತಂಡ ಮೂರು ಬಾರಿ 250ಕ್ಕಿಂತ ಹೆಚ್ಚು ಮೊತ್ತ ಪೇರಿಸಿದೆ. ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದೆ.
ದುರ್ಬಲ ಬೌಲಿಂಗ್ ಹೊಂದಿರುವ ಆರ್‌ಸಿಬಿ ವಿರುದ್ಧವೂ ಹೈದರಾಬಾದ್‌ ತನ್ನ ದಂಡಯಾತ್ರೆಯನ್ನು ಮುಂದುವರಿಸಿದಲ್ಲಿ ಅಚ್ಚರಿಯೇನಿಲ್ಲ. ಆಡಿದ ಎಂಟರಲ್ಲಿ ಆರ್‌ಸಿಬಿ ಗೆದ್ದಿರುವುದು ಒಂದು ಮಾತ್ರ.
ಅದು ತವರಿನಲ್ಲಿ ಪಂಜಾಬ್‌ ಕಿಂಗ್ಸ್ ಎದುರು. ಹೈದರಾಬಾದ್ ತಂಡ ಏಳು ಪಂದ್ಯಗಳಿಂದ 10 ಪಾಯಿಂಟ್ಸ್‌ ಕಲೆ ಹಾಕಿದೆ.