ಒಂದು ಪಂದ್ಯದಿಂದ ರಿಷಭ್‌ ಪಂತ್‌ ಅಮಾನತು
ನವದೆಹಲಿ:ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್‌ ಪಂತ್‌ ರನ್ನು ಒಂದು ಪಂದ್ಯದಿಂದ ಅಮಾನತು ಮಾಡಲಾಗಿದೆ.
ಮೇ 7 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್‌ ರೇಟ್‌ ಗಾಗಿ ಪಂತ್‌ ಅವರನ್ನು ಒಂದು ಪಂದ್ಯಕ್ಕೆ ನಿಷೇಧ ಹಾಗೂ 30 ಲಕ್ಷ ರೂಪಾಯಿಯ ದಂಡವನ್ನು ವಿಧಿಸಲಾಗಿದೆ.
ಇನ್ನಿಂಗ್ಸ್‌ ನ ಕೊನೆಯ ಓವರ್‌ ಆರಂಭದ ವೇಳೆ ಡೆಲ್ಲಿ 10 ನಿಮಿಷ ಹಿಂದೆ ಇತ್ತು ಎನ್ನಲಾಗಿದೆ. ಈ ಸೀಸನ್‌ ನಲ್ಲಿ ಡೆಲ್ಲಿ ಮೂರನೇ ಬಾರಿ ನಿಧಾನಗತಿಯ ಓವರ್‌ ರೇಟ್‌ ಕಾರಣಕ್ಕಾಗಿ ದಂಡ ವಿಧಿಸಿಕೊಂಡಿದೆ. ಉಳಿದ ಆಟಗಾರರಿಗೆ ಆಟಗಾರರು, ಇಂಪ್ಯಾಕ್ಟ್‌ ಪ್ಲೇಯರ್ಸ್‌ ಅವರಿಗೆ 12 ಲಕ್ಷ ಅಥವಾ ಅವರ ಪಂದ್ಯ ಶುಲ್ಕದ 50% ರಷ್ಟು ದಂಡ ವಿಧಿಸಲಾಗಿದೆ.
ಓಂಬುಡ್ಸ್‌ಮನ್ ವರ್ಚುವಲ್ ವಿಚಾರಣೆಯನ್ನು ನಡೆಸಿ ಇರದಲ್ಲಿ ಮ್ಯಾಚ್ ರೆಫರಿಯ ನಿರ್ಧಾರವು ಅಂತಿಮ ಎಂದು ಹೇಳಿದೆ.
ಒಂದು ಪಂದ್ಯದ ನಿಷೇಧದ ಹಿನ್ನೆಲೆಯಲ್ಲಿ ರಿಷಭ್‌ ಪಂತ್‌ ಅವರು, ಭಾನುವಾರ(ಮೇ 12 ರಂದು) ಬೆಂಗಳೂರು ವಿರುದ್ಧದ ಪಂದ್ಯಕ್ಕೆ ಪಂತ್‌ ಅಲಭ್ಯ ರಾಗಲಿದ್ದಾರೆ.