ಪುರುಷರ ಹಾಕಿ: ಹಾಲಿ ವಿಶ್ವ ಚಾಂಪಿಯನ್ ಜರ್ಮನಿಗೆ ಸೋಲು
ಲಂಡನ್: ಭಾರತದ ಪುರುಷರ ಹಾಕಿ ತಂಡ ಎಫ್ ಐ ಎಚ್ ಪ್ರೊ ಲೀಗ್ ಹಾಕಿ ಪಂದ್ಯಾವಳಿಯಲ್ಲಿ ಹಾಲಿ ವಿಶ್ವ ಚಾಂಪಿಯನ್ ಜರ್ಮನಿ ವಿರುದ್ಧ ಶನಿವಾರ 3-0 ಗೋಲುಗಳ ಅಂತರದ ಅಮೋಘ ಜಯ ಸಾಧಿಸಿದೆ.
ನಾಯಕ ಹರ್ಮನ್‌ಪ್ರೀತ್, ಸುಖ್‌ಜೀತ್, ಗುರ್ಜಂತ್ ಭಾರತದ ಆಕರ್ಷಕ 3 ಗೋಲುಗಳನ್ನು ಗಳಿಸಿದರು. ಜರ್ಮನಿಗೆ ಒಂದೂ ಗೋಲು ಗಳಿಸಲು ಅವಕಾಶವನ್ನೇ ನೀಡಲಿಲ್ಲ.
ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರು ಪಂದ್ಯಾವಳಿಯಲ್ಲಿ ತಮ್ಮ 10 ನೇ ಗೋಲು ಗಳಿಸಿದರು. ಭಾರತವು ತನ್ನ ಮೊದಲ ಪೆನಾಲ್ಟಿ ಕಾರ್ನರ್ ಅನ್ನು ಪಡೆದುಕೊಂಡು 16 ನೇ ನಿಮಿಷದಲ್ಲಿ ಸುಖಜೀತ್ ಅವರ ತ್ವರಿತ ಆಟದಿಂದಾಗಿ ಗೋಲು ಸಾಧ್ಯವಾಯಿತು.
ಸುಖಜೀತ್ 41 ನೇ ನಿಮಿಷದಲ್ಲಿ ಇನ್ನೊಂದು ಗೋಲು ಗಳಿಸಲು ತನ್ನ ಬ್ಯಾಕ್‌ಹ್ಯಾಂಡ್ ಅನ್ನು ಬಳಸಿದರೆ, 44 ನೇ ನಿಮಿಷದಲ್ಲಿ ಜರ್ಮನ್‌ಪ್ರೀತ್ ಸಿಂಗ್ ಮತ್ತು ಗುರ್ಜಂತ್ ಸಿಂಗ್ ಅವರ ಡಿಫ್ಲೆಕ್ಷನ್‌ನಿಂದ ತಂಡ ಗೋಲು ಸಾಧಿಸಿತು.
ಜರ್ಮನಿ ಪಂದ್ಯದುದ್ದಕ್ಕೂ 12 ಪೆನಾಲ್ಟಿ ಕಾರ್ನರ್‌ಗಳನ್ನು ಗಳಿಸಿತು ಆದರೆ ಇನ್ನೂ ಒಂದೇ ಒಂದು ಗೋಲನ್ನು ಪರಿವರ್ತಿಸಲು ಸಾಧ್ಯವಾಗ ಲಿಲ್ಲ.ಭಾರತ ತಂಡ ಅಷ್ಟೊಂದು ರಕ್ಷಣಾತ್ಮಕವಾಗಿ ಆಟವಾಡಿತು.