ಹರಾರೆಗೆ ಬಂದಿಳಿದ ಭಾರತ ತಂಡ
ಹರಾರೆ:ಆತಿಥೇಯ ಜಿಂಬಾಬ್ವೆ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನಾಡಲು ಭಾರತ ತಂಡ ಹರಾರೆಗೆ ತಲುಪಿದೆ.
ಆಟಗಾರರು ಮತ್ತು ಹಂಗಾಮಿ ಕೋಚ್​ ವಿವಿಎಸ್​ ಲಕ್ಮ್ಮಣ್ ಜಿಂಬಾಬ್ಬೆಗೆ ತಲುಪಿರುವ ಫೋಟೊವನ್ನು ಜಿಂಬಾಬ್ವೆ ಕ್ರಿಕೆಟ್‌ ಮಂಡಳಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಉಭಯ ತಂಡಗಳ ಸರಣಿ ಜು.6 ರಿಂದ ಆರಂಭಗೊಳ್ಳಲಿದೆ.
ಬುಧವಾರ ಜಿಂಬಾಬ್ವೆಗೆ ಬಂದಿಳಿದ ಟೀಮ್​ ಇಂಡಿಯಾಕ್ಕೆ ಆತ್ಮೀಯ ಸ್ವಾಗತ ಕೋರಲಾಯಿತು. ಗುರುವಾರದಿಂದ ಆಟಗಾರರು ಅಭ್ಯಾಸ ಆರಂಭಿಸಲಿ ದ್ದಾರೆ.
ಚೊಚ್ಚಕ ಕರೆ ಪಡೆದ ಹರ್ಷಿತ್ ರಾಣಾ ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ ಮೊನಚಾದ ಬೌಲಿಂಗ್​ ಮೂಲಕ ಒಟ್ಟು 19 ವಿಕೆಟ್​ ಕಿತ್ತು ಮಿಂಚಿದ್ದರು. ಮಾಯಾಂಕ್​ ಅಗರ್ವಾಲ್​ ವಿಕೆಟ್​ ಕಿತ್ತು ದುರ್ವರ್ತನೆ ತೋರಿದ ಕಾರಣಕ್ಕೆ ದಂಡ ಮತ್ತು ಒಂದು ಪಂದ್ಯದ ನಿಷೇಧ ಶಿಕ್ಷೆ ಕೂಡ ಎದುರಿಸಿದ್ದರು.
ಭಾರತ ತಂಡ
ಶುಭಮನ್ ಗಿಲ್ (ನಾಯಕ), ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಧ್ರುವ್ ಜುರೆಲ್ (ವೀಕಿ), ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ, ಸಾಯಿ ಸುದರ್ಶನ್, ಜಿತೇಶ್ ಶರ್ಮಾ (ವೀಕಿ) , ಹರ್ಷಿತ್ ರಾಣಾ.
ವೇಳಾಪಟ್ಟಿ
1ನೇ ಟಿ20: ಜುಲೈ 6, ಹರಾರೆ, ಸಂಜೆ 4.30
2ನೇ ಟಿ20: ಜುಲೈ 7, ಹರಾರೆ, ಸಂಜೆ 4.30
3ನೇ T20: ಜುಲೈ 10, ಹರಾರೆ, ಸಂಜೆ 4.30
4ನೇ T20: ಜುಲೈ 13, ಹರಾರೆ, ಸಂಜೆ 4.30
5 ನೇ T20: ಜುಲೈ 14, ಹರಾರೆ, ಸಂಜೆ 4.30