ಮೊದಲ ಏಷ್ಯಾ ಕಪ್ ಗೆದ್ದ ಶ್ರೀಲಂಕಾ ವನಿತೆಯರ ತಂಡ
ಉಭಯ ತಂಡಗಳು
ಭಾರತ ತಂಡ:ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಉಮಾ ಛೆಟ್ರಿ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ತನುಜಾ ಕನ್ವರ್ ಮತ್ತು ರೇಣುಕಾ ಠಾಕೂರ್ ಸಿಂಗ್.
ಶ್ರೀಲಂಕಾ ತಂಡ:ವಿಶಾಮಿ ಗುಣರತ್ನೆ, ಚಾಮರಿ ಅಟಪಟ್ಟು (ನಾಯಕಿ), ಹರ್ಷಿತಾ ಸಮರವಿಕ್ರಮ, ಕವಿಶ್ಕಾ ದಿಲ್ಹಾರಿ, ನೀಲಾಕ್ಷಿ ಡಿ ಸಿಲ್ವಾ, ಅನುಷ್ಕಾ ಸಂಜೀವನಿ (ವಿಕೆಟ್ ಕೀಪರ್), ಹಾಸಿನಿ ಪೆರೆರಾ, ಸುಗಂದಿಕಾ ಕುಮಾರಿ, ಇನೋಶಿ ಪ್ರಿಯದರ್ಶಿನಿ, ಉದೇಶಿಕಾ ಪ್ರಬೋಧನಿ, ಸಚಿನಿ ನಿಸಂಸಲಾ.
ಇದುವರೆಗೆ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಭಾರತ, ಲೀಗ್ ಹಂತದಲ್ಲಿ ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ, ಯುನೈಟೆಡ್ ಅರಬ್ ಎಮಿರೇಟ್ಸ್ ತಂಡವನ್ನು 78 ರನ್‌ಗಳಿಂದ ಮತ್ತು ನೇಪಾಳವನ್ನು 82 ರನ್‌ಗಳಿಂದ ಸೋಲಿಸಿತು. ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶವನ್ನು 10 ವಿಕೆಟ್‌ಗಳಿಂದ ಸೋಲಿಸಿದ್ದ ಹರ್ಮನ್ ಪಡೆ ಅಜೇಯ ತಂಡವಾಗಿ ಫೈನಲ್ ಪ್ರವೇಶಿತ್ತು.
ಶ್ರೀಲಂಕಾ ತಂಡ ಕೂಡ ಇಲ್ಲಿಯವರೆಗೆ ಅಜೇಯವಾಗಿದೆ. ಪಂದ್ಯಾವಳಿಯಲ್ಲಿ ರನ್‌ಗಳ ವಿಷಯದಲ್ಲಿ ಅತಿ ದೊಡ್ಡ ಗೆಲುವನ್ನೂ ಸಾಧಿಸಿದ ದಾಖಲೆ ನಿರ್ಮಿಸಿದೆ. ಶ್ರೀಲಂಕಾ ಗುಂಪು ಹಂತದಲ್ಲಿ ಮಲೇಷ್ಯಾವನ್ನು 144 ರನ್‌ಗಳಿಂದ ಸೋಲಿಸಿತ್ತು.