ಭಾರತಕ್ಕೆ ಐರ್ಲೆಂಡ್ ವಿರುದ್ಧ 2-0 ಅಂತರದ ಜಯ
ಪ್ಯಾರಿಸ್ ಒಲಿಂಪಿಕ್ಸ್‌ :2024ರ ಪ್ಯಾರಿಸ್ ಒಲಿಂಪಿಕ್ಸ್‌’ನಲ್ಲಿ ಭಾರತ ಹಾಕಿ ತಂಡವು ಪ್ರಬಲ ಪ್ರದರ್ಶನವನ್ನ ದಾಖಲಿಸಿದೆ ಮತ್ತು ತನ್ನ ಎರಡನೇ ವಿಜಯ ದಾಖಲಿಸಿದೆ.
ಕಳೆದ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ 1-1 ಗೋಲುಗಳಿಂದ ಡ್ರಾ ಸಾಧಿಸಿದ್ದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಪಡೆ, ಪೂಲ್ ಹಂತದ ತನ್ನ ಮೂರನೇ ಪಂದ್ಯದಲ್ಲಿ ಪ್ರಬಲ ಪುನರಾಗಮನ ಮಾಡಿ ಯಾವುದೇ ತೊಂದರೆಯಿಲ್ಲದೆ ಐರ್ಲೆಂಡ್ ವಿರುದ್ಧ 2-0 ಅಂತರದಲ್ಲಿ ಜಯ ಸಾಧಿಸಿತು.
ಎರಡೂ ಗೋಲುಗಳನ್ನ ಬಾರಿಸಿದ ನಾಯಕ ಹರ್ಮನ್‌ಪ್ರೀತ್ ಮತ್ತೊಮ್ಮೆ ಟೀಂ ಇಂಡಿಯಾದ ಗೆಲುವಿನ ತಾರೆಯಾದರು. ತಮ್ಮ ಕೊನೆಯ ಒಲಿಂಪಿಕ್ಸ್ ಆಡುತ್ತಿದ್ದ ಅನುಭವಿ ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್ ದ್ವಿತೀಯಾರ್ಧದಲ್ಲಿ ಹಲವು ಹೊಡೆತಗಳನ್ನ ಉಳಿಸಿ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು. ಈ ಗೆಲುವಿನೊಂದಿಗೆ ತಂಡ ಬಿ ಪೂಲ್‌’ನಲ್ಲಿ ಮೂರನೇ ಸ್ಥಾನದಿಂದ ಮೊದಲ ಸ್ಥಾನಕ್ಕೆ ಜಿಗಿದಿದೆ.