ಕ್ವಾರ್ಟರ್ ಫೈನಲ್​ನಲ್ಲೇ ರಾಫೆಲ್ ನಡಾಲ್ – ಕಾರ್ಲೋಸ್ ಅಲ್ಕರಾಝ್ ಅಭಿಯಾನ ಅಂತ್ಯ
ರೋಲ್ಯಾಂಡ್ ಗ್ಯಾರೋನ್​ನ ಕ್ಲೇ ಕೋರ್ಟ್​ನಲ್ಲಿ ನಡೆದ 3 ಸುತ್ತಿನ ಈ ಪಂದ್ಯದಲ್ಲಿ ಅಭಿಮಾನಿಗಳ ಸಂಪೂರ್ಣ ಬೆಂಬಲ ರಾಫೆಲ್ ನಡಾಲ್ ಹಾಗೂ ಕಾರ್ಲೋಸ್ ಅಲ್ಕರಾಝ್​ಗೆ ಲಭಿಸಿತ್ತು. ಆದರೆ ಆರಂಭದಲ್ಲೇ ಪರಾಕ್ರಮ ಮೆರೆದ ಆಸ್ಟಿನ್ ಕ್ರಾಜಿಸೆಕ್ ಮತ್ತು ರಾಜೀವ್ ರಾಮ್ 2-6 ಅಂತರದಿಂದ ಮೊದಲ ಸೆಟ್​ ಗೆಲ್ಲುವಲ್ಲಿ ಯಶಸ್ವಿಯಾದರು.
ಇದಾಗ್ಯೂ ನಡಾಲ್ – ಅಲ್ಕರಾಝ್ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ದ್ವಿತೀಯ ಸುತ್ತಿನಲ್ಲೂ ನಿರಾಸೆ ಕಾದಿತ್ತು. ಅದ್ಭುತ ಫುಟ್​ವರ್ಕ್ ಪ್ರದರ್ಶಿಸಿದ ಆಸ್ಟ್ರಿಕ್ ಕ್ರಾಜಿಸೆಕ್ ಫೋರ್​ಹ್ಯಾಂಡ್, ಬ್ಯಾಂಕ್​ಹ್ಯಾಡ್ ಶಾಟ್​ಗಳ ಮೂಲಕ ಕಮಾಲ್ ಮಾಡಿದರು. ಪರಿಣಾಮ ಸ್ಪೇನ್ ಜೋಡಿಯು 4 ಅಂಕಗಳನ್ನು ಕಲೆಹಾಕುವಷ್ಟರಲ್ಲಿ ಆಸ್ಟಿನ್ ಕ್ರಾಜಿಸೆಕ್ ಮತ್ತು ರಾಜೀವ್ ರಾಮ್ 6 ಅಂಕಗಳನ್ನು ಪೂರ್ಣಗೊಳಿಸಿದರು.
ಈ ಮೂಲಕ ಕ್ಲೇ ಕೋರ್ಟ್​ನ ಕಿಂಗ್ ಎಂದು ಕರೆಸಿಕೊಳ್ಳುವ ರಾಫೆಲ್ ನಡಾಲ್ ಹಾಗೂ ಕಾರ್ಲೋಸ್ ಅಲ್ಕರಾಝ್ ಅವರನ್ನು 6-2, 6-4 ನೇರ ಸೆಟ್‌ ಗಳಿಂದ ಸೋಲಿಸಿದರು.
ಪುರುಷರ ಸಿಂಗಲ್ಸ್​ ವಿಭಾಗದಿಂದಲೂ ರಾಫೆಲ್ ನಡಾಲ್ ಹೊರಬಿದ್ದಿದ್ದಾರೆ. ನೊವಾಕ್ ಜೊಕೊವಿಚ್ ವಿರುದ್ಧದ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದ ನಡಾಲ್ 6-1, 6-4 ಅಂತರದಿಂದ ಸೋಲುವ ಮೂಲಕ ಪ್ರಿ ಕ್ವಾರ್ಟರ್ ಫೈನಲ್​ಗೂ ಮುನ್ನ ಒಲಿಂಪಿಕ್ಸ್​ ಅಭಿಯಾನ ಅಂತ್ಯಗೊಳಿಸಿದ್ದರು.