ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ: ಮುಂಬೈನಲ್ಲಿ ಇಂದು ಸಭೆ
ಮುಂब्य़्:ಮುಂದಿನ ವರ್ಷದ ಐಪಿಎಲ್( 2025)​ 18ನೇ ಆವೃತ್ತಿಗೆ ನಡೆಯುವ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಕುರಿತು ಗುರುವಾರ ಬಿಸಿಸಿಐ ಮತ್ತು ಐಪಿಎಲ್​ ಆಡಳಿತ ಮಂಡಳಿ ಎಲ್ಲ 10 ಫ್ರಾಂಚೈಸಿಗಳ ಜತೆ ಮುಂಬೈನಲ್ಲಿ ಸಭೆ ನಡೆಸಲಿದೆ.
ಸನ್​ರೈಸರ್ಸ್​ ಹೈದರಾಬಾದ್​, ಚೆನ್ನೈ ಸೂಪರ್​ ಕಿಂಗ್ಸ್​, ಹಾಲಿ ಚಾಂಪಿಯನ್​ ಕೆಕೆಆರ್ ಫ್ರಾಂಚೈಸಿ ಮಾಲಿಕರು​ ಕನಿಷ್ಠ 7 ಆಟಗಾರರನ್ನಾದರೂ ತಂಡದಲ್ಲಿ ಉಳಿಸಿಕೊಳ್ಳುವ ಅವಕಾಶ ನೀಡಬೇಕೆಂದು ಬೇಡಿಕೆ ಇರಿಸಿವೆ ಎಂದು ವರದಿಯಾಗಿದೆ.