ಒಲಿಂಪಿಕ್ಸ್: ಸೆಮಿಫೈನಲ್’ಗೆ ಭಾರತ ಹಾಕಿ ತಂಡ ಪ್ರವೇಶ
ಪ್ಯಾರಿಸ್ ಒಲಿಂಪಿಕ್ಸ್:ಭಾರತ ಹಾಕಿ ತಂಡ ಐತಿಹಾಸಿಕ ದಾಖಲೆ ಬರೆದಿದೆ. ಒಲಿಂಪಿಕ್ಸ್ ಸೆಮಿಫೈನಲ್ ಪ್ರವೇಶಿಸಿದೆ.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆದ್ದ ಭಾರತ ತಂಡ ಸೆಮಿ ಫೈನಲ್ ಪ್ರವೇಶಿಸಿದೆ. ಗ್ರೇಟ್ ಬ್ರಿಟನ್ ವಿರುದ್ಧ ಭಾರತ ತಂಡ ಜಯಗಳಿಸಿದೆ. ಪೆನಾಲ್ಟಿ ಶೂಟ್ ಔಟ್ ನಲ್ಲಿ 4 -2 ಅಂತರದಿಂದ ಭಾರತಕ್ಕೆ ಜಯ ದೊರೆತಿದೆ. ಹರ್ಮನ್ ಪ್ರೀತ್ ನೇತೃತ್ವದ ಭಾರತ ಹಾಕಿ ತಂಡ ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.
ಪ್ಯಾರಿಸ್ ಒಲಿಂಪಿಕ್ಸ್‌ ನಲ್ಲಿ ಆಗಸ್ಟ್ 4 ರಂದು ನಡೆದ ಪುರುಷರ ಹಾಕಿ ಸ್ಪರ್ಧೆಯ ಮೊದಲ ಕ್ವಾರ್ಟರ್‌ಫೈನಲ್‌ನಲ್ಲಿ 10 ಮಂದಿಯ ಭಾರತೀಯ ಹಾಕಿ ತಂಡವು ಗ್ರೇಟ್ ಬ್ರಿಟನ್ ವಿರುದ್ಧ ನಂಬಲಾಗದ ಜಯವನ್ನು ದಾಖಲಿಸಿದೆ. ಭಾರತವು ಸೆನ್ಸೇಷನಲ್ ಶೂಟೌಟ್‌ನಲ್ಲಿ 4-2 ರಿಂದ ಗೆಲುವು ದಾಖಲಿಸುವ ಮೂಲಕ ಬ್ರಿಟನ್ ತಂಡವನ್ನು ಸೋಲಿಸಿತು. ನಿಯಮಿತ ಸಮಯದಲ್ಲಿ ಆಟ 1-1 ಸಮಬಲಗೊಂಡಿತು.