ಕಂಚಿನ ಪದಕ ಗೆದ್ದ ಭಾರತ ಪುರುಷರ ಹಾಕಿ ತಂಡ
ಪ್ಯಾರಿಸ್ :ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಸ್ಪೇನ್ ತಂಡವನ್ನ 2-1 ಗೋಲುಗಳಿಂದ ಮಣಿಸಿದ ಭಾರತ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದುಕೊಂಡಿತು. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮೂರನೇ ಸ್ಥಾನ ಪಡೆದಿದ್ದರಿಂದ ಸತತ ಎರಡನೇ ಕಂಚಿನ ಪದಕವಾಗಿದೆ.
ಎರಡನೇ ಕ್ವಾರ್ಟರ್’ನಲ್ಲಿ ಸ್ಪೇನ್ ತಂಡದ ನಾಯಕ ಮಾರ್ಕ್ ಮಿರಾಲೆಸ್ ಪೆನಾಲ್ಟಿ ಸ್ಟ್ರೋಕ್ ಮೂಲಕ ಗೋಲು ಬಾರಿಸಿ ಸೋಲಿನ ಅಂತರವನ್ನ ತಗ್ಗಿಸಿದರು. ಆದರೆ ಭಾರತ 30 ಮತ್ತು 33ನೇ ನಿಮಿಷದಲ್ಲಿ ಗೋಲು ಬಾರಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟಿತು. ಸ್ಪೇನ್ ದಾಳಿಯನ್ನ ಮುಂದುವರಿಸಿದರೆ, ಪಿ.ಆರ್ ಶ್ರೀಜೇಶ್ ಗೋಲಿನ ಮುಂದೆ ಗೋಡೆಯಂತೆ ನಿಂತು ತಮ್ಮ ತಂಡವನ್ನ ಅದ್ಭುತ ಗೆಲುವಿನತ್ತ ಮುನ್ನಡೆಸುವಲ್ಲಿ ಯಶಸ್ವಿಯಾದರು.
ನಿವೃತ್ತಿ ಘೋಷಿಸಿರುವ ಶ್ರೀಜೇಶ್ ಅವರಿಗೆ ಇದು ಅಂತಿಮ ಪಂದ್ಯವಾಗಿದ್ದು, ಪಂದ್ಯದ ನಂತರ, ಇಡೀ ತಂಡವು ಗೋಲ್ ಕೀಪರ್’ಗೆ ಭಾವನಾತ್ಮಕ ಗೌರವ ಸಲ್ಲಿಸಿತು. ಪಂದ್ಯದ ನಂತರ ತಮ್ಮ ಗೌರವವನ್ನ ತೋರಿಸಲು ಇಡೀ ತಂಡವು ಗೋಲ್ ಕೀಪರ್ ಮುಂದೆ ತಲೆಬಾಗಿ ನಮಸ್ಕರಿಸಿತು.
ಭಾರತೀಯ ಪುರುಷರ ಹಾಕಿ ತಂಡವು ಸ್ಪೇನ್‌ ವಿರುದ್ಧ 2-1 ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿದ್ದು, ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದೆ. ಈ ಮೂಲಕ ಭಾರತಕ್ಕೆ ನಾಲ್ಕನೇ ಕಂಚಿನ ಪದಕ ಬಂದಂತಾಗಿದೆ. ಹರ್ಮನ್​ಪ್ರೀತ್ ಸಿಂಗ್ ನೇತೃತ್ವದ ಭಾರತ ಪುರುಷರ ತಂಡ ಹಾಕಿ ಒಂದ್ಯದಲ್ಲಿ ಕಂಚಿನ ಪದಕ ಗೆದ್ದುಕೊಂಡಿದೆ.
ಸ್ಪೇನ್ ತಂಡದ ನಾಯಕ ಮಾರ್ಕ್ ಮಿರಾಲೆಸ್ 11ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಇದರೊಂದಿಗೆ ಸ್ಪೇನ್​ ಮುನ್ನಡೆಯನ್ನು ಪಡೆದುಕೊಂಡಿತು. ಸ್ವಲ್ಪ ಹೊತ್ತಿನಲ್ಲಿಯೇ ಭಾರತ ತಂಡದ ನಾಯಕ ಹರ್ಮನ್​ಪ್ರೀತ್ ಸಿಂಗ್ ಗೋಲು ಬಾರಿಸುವ ಮೂಲಕ ಸಮಬಲಗೊಳ್ಳುವಂತೆ ಮಾಡಿದರು. ಮೂರನೇ ಕ್ವಾರ್ಟರ್​ನಲ್ಲಿ ಮತ್ತೊಂದು ಗೋಲ್ ಬಾರಿಸಿ ಅವರು ಮುನ್ನಡೆ ತಂದುಕೊಟ್ಟರು. ಅದೇ ಮುನ್ನಡೆಯನ್ನು ಕೊನೇ ತನಕ ಉಳಿಸಿಕೊಂಡು ತಂಡ ಗೆಲುವು ಸಾಧಿಸಿತು.
ನಾಯಕ ಹರ್ಮನ್​ಪ್ರೀತ್ ಸಿಂಗ್, ಕಂಚಿನ ಪದಕದ ಪಂದ್ಯದಲ್ಲೂ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಈ ಪಂದ್ಯದಲ್ಲೂ ನಾಯಕ ಹರ್ಮನ್‌ಪ್ರೀತ್ ಸಿಂಗ್ ಎರಡೂ ಗೋಲುಗಳನ್ನು ಬಾರಿಸಿ ತಂಡವನ್ನು ಕಂಚಿನ ಪದಕ ಗೆಲುವಿನತ್ತ ತೆಗೆದುಕೊಂಡು ಹೋದರು.
ಇನ್ನು ಪಂದ್ಯದ ಕೊನೆಯವರೆಗೂ ಶ್ರೀಜೇಶ್ ಅತ್ಯುತ್ತಮ ಪ್ರದರ್ಶನ ನೀಡಿ ಎದುರಾಳಿಗಳ ಅಬ್ಬರದ ಹೊಡೆತಗಳನ್ನು ತಡೆದು ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಅಷ್ಟೇ ಅಲ್ಲದೆ, ತಂಡದ ನಾಯಕ ಹರ್ಮನ್‌ಪ್ರೀತ್‌ ಸಿಂಗ್ ಕೂಡ 10 ಗೋಲು ಬಾರಿಸುವ ಮೂಲಕ ತಂಡಕ್ಕೆ ಆಸರೆ ಆದರು. ಈ ಮೂಲಕ ಸ್ಪೇನ್‌ ತಂಡವನ್ನು ಸೋಲಿಸಿ ಕಂಚಿನ ಪದಕ ಮುಡಿಗೇರಿಸಿಕೊಂಡರು.