 : ಗೆಲುವಿನ ಶುಭಾರಂಭ ಕಂಡ ಕನ್ನಡಿಗ ಸುಹಾಸ್ ಯತಿರಾಜ್
ಪ್ಯಾರಿಸ್‌:ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪುರುಷರ ಪ್ಯಾರಾ ಬ್ಯಾಡ್ಮಿಂಟನ್ ತಾರೆಗಳಾದ ಸುಕಾಂತ್ ಕದಮ್( ), ಕನ್ನಡಿಗ ಸುಹಾಸ್ ಯತಿರಾಜ್( ) ಮತ್ತು ತರುಣ್‌ ಥಿಲ್ಲೋನ್‌( )ಗೆಲುವಿನ ಶುಭಾರಂಭ ಕಂಡಿದ್ದಾರೆ. ಪುರುಷರ ಸಿಂಗಲ್ಸ್‌ ಎಸ್‌ಎಲ್‌4 ಗುಂಪು ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಮುಂದಿನ ಹಂತಕ್ಕೇರಿದ್ದಾರೆ. ಆದರೆ ಮಹಿಳಾ ವಿಭಾಗದಲ್ಲಿ ಮಾನಸಿ ಜೋಶಿ( ) ಮತ್ತು ಮನ್‌ದೀಪ್‌ ಕೌರ್‌( ) ಸೋಲು ಕಂಡು ನಿರಾಸೆ ಮೂಡಿಸಿದರು.
ಸುಹಾಸ್‌ ಅವರು ಇಂಡೋನೇಷ್ಯಾದ ಹಿಕ್ಮತ್ ರಾಮದಾನಿ ಅವರನ್ನು 21-7, 21-5 ನೇರ ಗೇಮ್‌ಗಳಿಂದ ಮಣಿಸಿದರು. ಸುಕಾಂತ್ ಕದಮ್  ಮಲೇಷ್ಯಾದ ಮೊಹಮ್ಮದ್ ಅಮೀನ್ ಬುರ್ಹಾನುದ್ದೀನ್ ವಿರುದ್ಧ ಮೂರು ಸುತ್ತುಗಳ ಮ್ಯಾರಥಾನ್‌ ಹೋರಾಟದಲ್ಲಿ 17-21, 21-15, 22-20 ಗೇಮ್‌ಗಳ ಅಂತರದಿಂದ ಗೆಲುವಿನ ನಿಟ್ಟುಸಿರುಬಿಟ್ಟರು.
ಮಹಿಳಾ ಸಿಂಗಲ್ಸ್‌ SL3 ವಿಭಾಗದಲ್ಲಿ ಮಾನಸಿ ಜೋಶಿ ಅವರು ಅಗ್ರ ಶ್ರೇಯಾಂಕದ ಇಂಡೋನೇಷ್ಯಾದ ಕೊನಿಟಾ ಸೈಕುರೋಹ್ ವಿರುದ್ಧ ಮೊದಲ ಗೇಮ್‌ನಲ್ಲಿ ಗೆಲುವು ಸಾಧಿಸಿದರೂ ಕೂಡ ಆ ಬಳಿಕ ಎರಡು ಗೇಮ್‌ಗಳಲ್ಲಿ ಸೋಲು ಕಂಡರು. ಸೈಕುರೋಹ್ ಗೆಲುವಿನ ಅಂತರ 16-21, 21-13, 21-18.
://./SportsArena1234//1829102974762713101
ಪುರುಷರ ಸಿಂಗಲ್ಸ್‌ ಎಸ್‌ಎಲ್‌4 ‘ಡಿ’ ಗುಂಪಿನ ಮೊದಲ ಸುತ್ತಿನಲ್ಲಿ ಪಂದ್ಯದಲ್ಲಿ ಭಾರತದ ತರುಣ್‌ ಥಿಲ್ಲೋನ್‌ ಬ್ರೆಜಿಲ್‌ನ ರೊಜೆರಿಯೊ ಜೂನಿಯರ್ ಕ್ಸೇವಿಯರ್ ಡಿ ಒಲಿವೇರಾ ವಿರುದ್ಧ 21-17, 21-19 ನೇರ ಗೇಮ್‌ಗಳ ಅಂತರದಿಂದ ಗೆಲುವಿನ ನಗೆ ಬೀರಿದರು. ಇದಕ್ಕೂ ಮುನ್ನ ನಡೆದ ಮಹಿಳಾ ಸಿಂಗಲ್ಸ್‌ SL3 ವಿಭಾಗದ ‘ಬಿʼ ಗುಂಪಿನ ಪಂದ್ಯದಲ್ಲಿ ಭಾರತದ ಮನ್‌ದೀಪ್‌ ಕೌರ್‌ ನೈಜೀರಿಯಾದ ಮರಿಯಮ್ ಬೋಲಾಜಿ ವಿರುದ್ಧ 18-21, 14-21 ನೇರ ಗೇಮ್‌ಗಳಿಂದ ಪರಾಭವಗೊಂಡರು.
ಟೆಕ್ವಾಂಡೊ ಸ್ಪರ್ಧೆಯಲ್ಲಿ ನಿರಾಸೆ
ಪದಕ ಗೆಲ್ಲಬಹುದಾಗಿದ್ದ ಟೆಕ್ವಾಂಡೊ ಸ್ಪರ್ಧೆಯಲ್ಲಿ ಮಹಿಳೆಯರ ಕೆ44-47 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲಿ ಭಾರತದ ಅರುಣಾ ಸಿಂಗ್‌ ತನ್ವಾರ್‌ 19-0 ಅಂತರದ ಸೋಲು ಕಂಡರು.