 : 11 ವರ್ಷಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಮೈಕಲ್‌ ಶೂಮೇಕರ್‌!
ಬರ್ಲಿನ್‌ (ಜರ್ಮನಿ):ಏಳು ಬಾರಿಯ ಫಾರ್ಮುಲಾ ಒನ್‌ ಚಾಂಪಿಯನ್ ಮೈಕಲ್‌ ಶೂಮೇಕರ್‌( ) ಅವರು ಅಪಘಾತದಲ್ಲಿ ಗಾಯಗೊಂಡ 11 ವರ್ಷಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. 55 ವರ್ಷದ ಶೂಮಾಕರ್‌ ತನ್ನ ಪುತ್ರಿ ಗಿನಾ ಶೂಮೇಕರ್  ಅವರ ವಿವಾಹ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ವೀಲ್‌ ಚೇರ್‌ನಲ್ಲಿರುವ ಫೋಟೊವೊಂದು ವೈರಲ್‌ ಆಗುತ್ತಿದ್ದು ಇದು ಶೂಮಾಕರ್‌ ಎನ್ನಲಾಗಿದೆ. ಈ ಫೋಟೊವನ್ನು ನೋಡುವಾಗ ಅವರ ಪರಿಚಯವೇ ಸಿಗದ ರೀತಿಯಲ್ಲಿದೆ. ಜೀವನ್ಮರಣ ಹೋರಾಟ ನಡೆಸುತ್ತಿದ್ದಂತಿದೆ.
             .../5t0fhM91vm
2013ರಲ್ಲಿ ಮೆರಿಬಲ್‌ನಲ್ಲಿರುವ ಫ್ರೆಂಚ್‌ ಸ್ಕೀ ರೆಸಾರ್ಟ್‌ ಬಳಿ ತಮ್ಮ ಪುತ್ರನ ಜತೆ ಸ್ಕೀಯಿಂಗ್ ಸಾಹಸ ಕ್ರೀಡೆಯಲ್ಲಿ ತೊಡಗಿದ್ದರು. ಈ ವೇಳೆ ಹಿಮದಲ್ಲಿ ವೇಗವಾಗಿ ಜಾರುತ್ತಿದ್ದಾಗ ಒಮ್ಮೆಲೆ ನಿಯಂತ್ರಣ ತಪ್ಪಿ ಬಿದ್ದಿದ್ದರಿಂದ ಅವರ ತಲೆ ಹಿಮಬಂಡೆಗೆ ಬಡಿದಿತ್ತು. ತಕ್ಷಣ ಅವರನ್ನು ಹೆಲಿಕಾಪ್ಟರ್‌ ಮೂಲಕ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಯ ಗಾಯ ಗಂಭೀರವಾದ ಕಾರಣ ಕೋಮಾ ಸ್ಥಿತಿಗೆ ಜಾರಿದ್ದರು. ಇದಾದ ಬಳಿಕ ಅವರು ಕುಟುಂಬದ ಕೆಲವೇ ಆಪ್ತರೊಂದಿಗೆ ಮಾತ್ರ ಸಂಪರ್ಕದಲ್ಲಿದ್ದರು.
 1   -  -       2002.             .(         ,  & T20       )../A6YA251R3Y
ಸಚಿನ್‌ಗೆ ಕಾರು ನೀಡಿದ್ದ ಶೂಮೇಕರ್
2002ರಲ್ಲಿ ಶೂಮೇಕರ್ ಅವರು ಸಚಿನ್‌ ಅವರನ್ನು ಭೇಟಿಯಾಗಿದ್ದರು. ಆ ಸಂದರ್ಭ ಶೂಮೇಕರ್ ಸಚಿನ್‌ಗೆ ಫೆರಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಡ್ರಾನ್ ಬ್ರಾಡ್ಮನ್ ಅವರ 29 ಟೆಸ್ಟ್ ಶತಕಗಳನ್ನು ಸರಿಗಟ್ಟಿದ ಸಾಧನೆ ಮಾಡಿದ್ದಕ್ಕೆ ಸಚಿನ್‌ಗೆ ಈ ಕಾರನ್ನು ನೀಡಿದ್ದರು. ಶೂಮೇಕರ್ ಭಾರತದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು. ಇದೊಂದು ವಿಭಿನ್ನವಾದ ಸಂಸ್ಕೃತಿಯ ತಾಣ ಎಂದು ಹಿಂದೊಮ್ಮೆ ಹೇಳಿದ್ದರು.
ಇದನ್ನೂ ಓದಿ : ಶಿವಾಜಿ ಪಾರ್ಕ್‌ನಲ್ಲಿ ನಿರ್ಮಾಣವಾಗಲಿದೆ ಕ್ರಿಕೆಟಿಗ ಸಚಿನ್‌ ಗುರು ಅಚ್ರೇಕರ್ ಪ್ರತಿಮೆ
    ://./../ra6eclT8lP
