  2024: ಸೆಮಿಯಲ್ಲಿ ಸೋತ ಬೋಪಣ್ಣ ಜೋಡಿ
ನ್ಯೂಯಾರ್ಕ್‌:ಇಲ್ಲಿ ನಡೆಯುತ್ತಿರುವ ಯುಎಸ್‌‍ ಓಪನ್‌ನ(  2024) ಮಿಶ್ರ ಡಬಲ್ಸ್‌‍ ಸೆಮಿಫೈನಲ್‌ನಲ್ಲಿ ಭಾರತದ ಟೆನಿಸ್‌‍ ತಾರೆ ರೋಹನ್‌ ಬೋಪಣ್ಣ( ) ಮತ್ತು ಅವರ ಜತೆಗಾರ್ತಿ ಇಂಡೋನೇಷ್ಯಾದ ಅಲ್‌ದಿಲಾ ಸುಟ್‌ಜಿದಿ( ) ಸೆಮಿ ಫೈನಲ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಬುಧವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಬೋಪಣ್ಣ ಜೋಡಿ  ಶ್ರೇಯಾಂಕ ರಹಿತ ಅಮೆರಿಕನ್‌ ಜೋಡಿಯಾದಟೇಲರ್ ಟೌನ್ಸೆಂಡ್-ಡೊನಾಲ್ಡ್ ಯಂಗ್‌ ವಿರುದ್ಧ3-6, 4-6 ಅಂತರದಿಂದ ಸೋತು ತಮ್ಮ ಅಭಿಯಾನ ಮುಗಿಸಿದರು.
ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ಬೋಪಣ್ಣ-ಸುಟ್‌ಜಿದಿ ಜೋಡಿ 4ನೇ ಶ್ರೇಯಾಂಕದ ಬಾರ್ಬೊರಾ ಕ್ರೆಜಿಕೋವಾ ಮತ್ತು ಮ್ಯಾಥ್ಯೂ ಎಂಬ್ಡೆನ್‌ ಜೋಡಿಯನ್ನು 7-6 (7-4), 2-6, 10-7 ಅಂತರದದಿಂದ ಹಿಮ್ಮೆಟ್ಟಿಸಿ ಸೆಮಿಗೆ ಲಗ್ಗೆಯಿಟ್ಟಿದ್ದರು. ಆದರೆ, ಸೆಮಿಯಲ್ಲಿ ಇದೇ ಪ್ರದರ್ಶನ ತೋರುವಲ್ಲಿ ವಿಫಲರಾದರು. ಇದಕ್ಕೂ ಮುನ್ನ ಪುರುಷರ ಡಬಲ್ಸ್‌ ಪ್ರೀ ಕ್ವಾರ್ಟರ್‌ ಪಂದ್ಯದಲ್ಲಿ  ಬೋಪಣ್ಣ ಅವರು ಎಂಬ್ಡೆನ್‌ ಜತೆಗೂಡಿ ಆಡಿ ಸೋಲು ಕಂಡಿದ್ದರು. ಕಳೆದ ಬಾರಿ ಬೋಪಣ್ಣ-ಎಂಬ್ಡೆನ್‌  ಜೋಡಿ ಕಳೆದ ಬಾರಿ ರನ್ನರ್‌ ಅಪ್‌ ಸ್ಥಾನ ಪಡೆದಿತ್ತು.
ಇದನ್ನೂ ಓದಿ  2024: ಪ್ರೀ ಕ್ವಾರ್ಟರ್‌ ಪ್ರವೇಶಿಸಿದ ವಿಶ್ವದ ನಂ.1 ಆಟಗಾರ್ತಿ ಸ್ವಿಯಾಟೆಕ್
ಸೆಮಿ ಫೈನಲ್‌ ತಲುಪಿದ ಅರಿನಾ ಸಬಲೆಂಕಾ
ಭುಜದ ಗಾಯದ ನೋವಿನಿಂದ ವಿಂಬಲ್ಡನ್‌ನಿಂದ ಹೊರಗುಳಿದಿದ್ದ ಬಲ್ಗೇರಿಯಾದ ಅರಿನಾ ಸಬಲೆಂಕಾ( ) ಅವರು ಪ್ರಸಕ್ತ ಸಾಗುತ್ತಿರುವ ಅಮೆರಿಕ ಓಪನ್‌ನಲ್ಲಿ( ) ಸೆಮಿಫೈನಲ್‌ ತಲುಪಿದ್ದಾರೆ. ಬುಧವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 2ನೇ ಶ್ರೇಯಾಂಕದ ಸಬಲೆಂಕಾ ಚೀನಾದ 7ನೇ ಶ್ರೇಯಾಂಕದ ಜೆಂಗ್‌ ಕ್ವಿನ್ವೆನ್‌ವಿರುದ್ಧ6-1, 6-2 ನೇರ ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದರು.ಶುಕ್ರವಾರ ನಡೆಯುವ ಸೆಮಿಫೈನಲ್‌ ಪಂದ್ಯದಲ್ಲಿ ಸಬಲೆಂಕಾ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಕೊಕೊ ಗಾಫ್ ಅವರನ್ನು ಮಣಿಸಿದಆತಿಥೇಯ ನಾಡಿನ ಎಮ್ಮಾ ನವಾರೊ ಸವಾಲು ಎದುರಿಸಲಿದ್ದಾರೆ.ಸಬಲೆಂಕಾ ಇತ್ತೀಚೆಗೆ ಮುಕ್ತಾಯ ಕಂಡಿದ್ದ ಸಿನ್ಸಿನಾಟಿ ಓಪನ್‌ ಟೆನಿಸ್‌(  ) ಪಂದ್ಯಾವಳಿಯಲ್ಲಿ ಒಂದೇ ಒಂದು ಸೆಟ್‌ ಕಳೆದುಕೊಳ್ಳದೆ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದರು. ಇದೀಗ ವರ್ಷದ ಕೊನೆಯ ಗ್ರಾನ್ ಸ್ಲಾಮ್ ಪ್ರಶಸ್ತಿಯನ್ನು ಎತ್ತಿ ಹಿಡಿಯುವ ಆತ್ಮವಿಶ್ವಾಸದಲ್ಲಿ ಗೆಲುವಿನ ಓಟವನ್ನು ಮುಂದುವರಿಸಿದ್ದಾರೆ.
ಮಂಗಳವಾರ ನಡೆದಿದ್ದ ಮಹಿಳಾ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ವಿಶ್ವದ ನಂ.1 ಆಟರ್ಗಾತಿ ಪೋಲೆಂಡ್‌ನ‌ ಇಗಾ ಸ್ವಿಯಾಟೆಕ್‌ ರಷ್ಯಾದ ಲುಡ್ಮಿಲಾ ಸಾಮ್ಸನೋವಾ ಅವರನ್ನು 6-4, 6-1 ಅಂತರದಿಂದ ಮಣಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದರು. ಇದು ಸ್ವಿಯಾಟೆಕ್‌ ಅವರ  100ನೇ ಗ್ರ್ಯಾನ್‌ಸ್ಲಾಮ್‌ ಪಂದ್ಯವಾಗಿತ್ತು.