 : ಕ್ಲಬ್ ಥ್ರೋ F51 ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಧರಂಬೀರ್, ಬೆಳ್ಳಿ ಗೆದ್ದ ಪ್ರಣವ್; 25 ಪದಕ ಸನಿಹದಲ್ಲಿ ಭಾರತ
ಪ್ಯಾರಿಸ್‌:ಪ್ಯಾರಾಲಿಂಪಿಕ್ಸ್‌ನಲ್ಲಿ( ) ಭಾರತದ ಕ್ರೀಡಾಪಟುಗಳ ಸರ್ವಶ್ರೇಷ್ಠ ನಿರ್ವಹಣೆಯ ಸಾಧನೆ ಮುಂದುವರಿದಿದೆ. ಸದ್ಯ ಭಾರತ 24 ಪದಕ ಗೆದ್ದು ಪದಕಪಟ್ಟಿಯಲ್ಲಿ 15ನೇ ಸ್ಥಾನಿಯಾಗಿದೆ. 5 ಚಿನ್ನ, 6 ಬೆಳ್ಳಿ, 10 ಕಂಚು ಒಳಗೊಂಡಿದೆ. ಬುಧವಾರ ತಡರಾತ್ರಿ ಭಾರತಕ್ಕೆ ಒಟ್ಟು 3 ಪದಕ ಒಲಿದಿತ್ತು. 2 ಚಿನ್ನ ಮತ್ತು 1 ಬೆಳ್ಳಿ.
ಪುರುಷರ ಕ್ಲಬ್ ಥ್ರೋ F51 ಸ್ಪರ್ಧೆಯಲ್ಲಿ ಭಾರತದ ಧರಂಬೀರ್( ) ಚಿನ್ನದ ಪದಕವನ್ನು ಗೆದ್ದರೆ, ಮತೋರ್ವ ಭಾರತೀಯ ಪ್ರಣವ್ ಸೂರ್ಮಾ(  ) ಬೆಳ್ಳಿ ಪದಕ ಗೆದ್ದರು. ಕ್ಲಬ್ ಥ್ರೋ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊದಲ ಪದಕ ಇದಾಗಿದೆ. ಇದಕ್ಕೂ ಮುನ್ನ ನಡೆದ ಪುರುಷರ ವೈಯಕ್ತಿಕ ರಿಕರ್ವ್ ಆರ್ಚರಿ ಫೈನಲ್‌ ಪಂದ್ಯದಲ್ಲಿ ಭಾರತದ ಹರ್ವಿಂದರ್ ಸಿಂಗ್( ) ಭರ್ಜರಿ ಪ್ರದರ್ಶನದೊಂದಿಗೆ ಚಿನ್ನ ಗೆದ್ದರು.
ಪುರುಷರ ಕ್ಲಬ್ ಥ್ರೋ F51 ಸ್ಪರ್ಧೆಯಲ್ಲಿ ಧರಂಬೀರ್ 34.92 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಏಷ್ಯನ್ ದಾಖಲೆಯನ್ನು ಮುರಿದು ಅಗ್ರಸ್ಥಾನದೊಂದಿಗೆ ಚಿನ್ನಕ್ಕೆ ಕೊರಳೊಡ್ಡಿದರು. ಧರ್ಮಬೀರ್ ಮೊದಲ 4 ಯತ್ನಗಳನ್ನು ಫೌಲ್ ಮಾಡಿದರೂ, 5ನೇ ಯತ್ನದಲ್ಲಿ 34.92 ಮೀ. ದೂರಕ್ಕೆ ಎಸೆದು ಮೊದಲ ಸ್ಥಾನ ಪಡೆದರು. ಪ್ರಣವ್ ಸೂರ್ಮಾ 34.59 ಮೀಟರ್‌ ದೂರ ಕ್ರಮಿಸಿ ಬೆಳ್ಳಿ ಪದಕ ಪಡೆದರು. ಇದೇ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಭಾರತ ಅಮಿತ್‌ ಕುಮಾರ್‌ 10ನೇ ಸ್ಥಾನ ಪಡೆದರು. ಸೆರ್ಬಿಯಾದ ಜೆಲ್ಕೊ ಡಿಮಿಟ್ರಿಜೆವಿಕ್ ಅವರು 34.18 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದೊಂದಿಗೆ ಕಂಚಿನ ಪದಕ ಪಡೆದರು.
:    ,  🔥🔥🔥   &         F51   .#Paralympics2024pic../yQcR61LkQX