 : ಸಬಲೆಂಕಾ-ಪೆಗುಲಾ ಫೈನಲ್‌ ಫೈಟ್‌
ನ್ಯೂಯಾರ್ಕ್‌:ಯುಎಸ್ ಓಪನ್( ) 2024 ರ ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವದ ನಂ.2 ಅರೀನಾ ಸಬಲೆಂಕಾ( ) ಫೈನಲ್‌ ಪ್ರವೇಶಿಸಿದ್ದಾರೆ. ಶನಿವಾರ ತಡರಾತ್ರಿ ನಡೆಯುವ ಫೈನಲ್‌(  ) ಪಂದ್ಯದಲ್ಲಿ ಅಮೆರಿಕದ ಜೆಸ್ಸಿಕಾ ಪೆಗುಲಾ(. ) ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್‌ ಸೆಮಿ ಫೈನಲ್‌ನ ಅತ್ಯಂತ ಜಿದ್ದಾಜಿದ್ದಿನ ಪಂದ್ಯದಲ್ಲಿ ಸಬಲೆಂಕಾ ಸ್ಥಳೀಯ ಆಟಗಾರ್ತಿ ಎಮ್ಮಾ ನವಾರೊ ಅವರನ್ನು 6-3, 7-6 (7-2) ಅಂತರದಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದರು. ಈ ಮೂಲಕ ಸತತವಾಗಿ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದರು. ಕಳೆದ ವರ್ಷವೂ ಸಬಲೆಂಕಾ ಫೈನಲ್‌ ಪ್ರವೇಶಿಸಿದ್ದರು. ಆದರೆ, ಕೋಕೊ ಗಾಫ್ ವಿರುದ್ಧ ಸೋತು ರನ್ನರ್‌ ಅಪ್‌ ಸ್ಥಾನ ಪಡೆದಿದ್ದರು. ಇದೀಗ ಮತ್ತೆ ಫೈನಲ್‌ ಪ್ರವೇಶಿಸಿರುವ ಅವರು ಚೊಚ್ಚಲ ಟ್ರೋಫಿಯ ನಿರೀಕ್ಷೆಯಲ್ಲಿದ್ದಾರೆ. ಸಬಲೆಂಕಾ ಈ ಹಿಂದೆ ಎರಡು ಬಾರಿ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಜಯಿಸಿದ್ದರು.
ಎಮ್ಮಾ ನವಾರೊ ಅವರು ಈ ಬಾರಿ ನಾಲ್ಕನೇ ಸುತ್ತಿನ ಹೋರಾಟದಲ್ಲಿ ಹಾಲಿ ಚಾಂಪಿಯನ್‌ ಗಾಫ್ ಅವರ ಆಟಕ್ಕೆ ಬ್ರೇಕ್‌ ಹಾಕಿದ್ದರು. ಹೀಗಾಗಿ ನವಾರೊ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿ ಕಾಣಿಸಿಕೊಂಡಿದ್ದರು. ಆದರೆ ಅವರ ಗೆಲುವಿನ ಓಟ ಸೆಮಿ ಫೈನಲ್‌ಗೆ ಅಂತ್ಯ ಕಂಡಿದೆ.
ಇದನ್ನೂ ಓದಿ : ಸೆಮಿಫೈನಲ್‌ಗೆ ಸಿನ್ನರ್‌; ಸ್ವಿಯಾಟೆಕ್‌ಗೆ ಸೋಲಿನ ಆಘಾತ
         “’      .      ?”* *: “,  ’   . . ’    ” 😂../Dr4ztrZSKZ
ಸಬಲೆಂಕಾ ಎದುರಾಳಿಯಾಗಿರುವ ಅಮೆರಿಕದ ಜೆಸ್ಸಿಕಾ ಪೆಗುಲಾ ವಿಶ್ವದ ನಂಬರ್‌ 1 ಖ್ಯಾತಿಯ ಇಗಾ ಸ್ವಿಯಾಟೆಕ್‌ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ ಹಂತಕ್ಕೇರಿದ್ದರು. ಸೆಮಿಯಲ್ಲಿ ಕರೋಲಿನಾ ಮುಚೋವಾ ವಿರುದ್ಧ ಮೂರು ಸೆಟ್‌ಗಳ ಹೋರಾಟದ ಬಳಿಕ ಗೆಲುವಿನ ನಿಟ್ಟುಸಿರುಬಿಟ್ಟರು. ಗೆಲುವಿನ ಅಂತರ 1-6, 6-4, 6-2. ಮುಚೋವಾ ಬ್ರೆಜಿಲ್‌ನ ಬೀಟ್ರಿಜ್ ಹಡ್ಡಾಡ್ ಮಾಯಾ ಅವರನ್ನು 6-1, 6-4 ರಿಂದ ಸೋಲಿಸಿ ಸೆಮಿಫೈನಲ್‌ ಪ್ರವೇಶಿಸಿದ್ದರು. ಸೆಮಿಯಲ್ಲಿ ಇದೇ ಪ್ರದರ್ಶನ ತೋರುವಲ್ಲಿ ವಿಫಲವಾಗಿ ಸೋಲು ಕಂಡರು. ಕಳೆದ ವರ್ಷ ಕೂಡ ಕರೋಲಿನಾ ಮುಚೋವಾ ಈ ಕೂಟದಲ್ಲಿ ಸೆಮಿಫೈನಲ್‌ ತಲುಪಿದ್ದರು. ಅಲ್ಲಿ ಕೋಕೊ ಗಾಫ್ ವಿರುದ್ಧ ಸೋತಿದ್ದರು. ಈ ಬಾರಿಯೂ ಸೆಮಿ ಹರ್ಡಲ್ಸ್‌ ದಾಟುವಲ್ಲಿ ವಿಫಲರಾದರು.
  '     – 2024:2  .    🇺🇲  13 .  6-3 7-6(7-2).        🇺🇲 6  .     🇨🇿  . Muchová 1-6 6-4 6-2. 1st  .../RD9hUpMbly
ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ ನಂ.1 ಆಟಗಾರ ಜಾನಿಕ್‌ ಸಿನ್ನರ್‌( ) ರಶ್ಯದ ಡೇನಿಯಲ್‌ ಮೆಡ್ವಡೇವ್‌( ) ಅವರನ್ನು ಮಣಿಸಿ ಚೊಚ್ಚಲ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.   ನಾಲ್ಕು ಸೆಟ್‌ಗಳ ಮ್ಯಾರಾಥ್ಯಾನ್‌ ಹೋರಾಟದಲ್ಲಿ ಸಿನ್ನರ್‌ ಅವರು ಮೆಡ್ವಡೇವ್‌ ವಿರುದ್ಧ 6-2, 1-6, 6-1, 6-4 ಅಂತರದಿಂದ ಗೆದ್ದು ಬಂದರು.