 2024 : 6 ಚಿನ್ನದ ಪದಕ; 56 ವರ್ಷಗಳಲ್ಲಿ ಹೊಸ ದಾಖಲೆ ಸೃಷ್ಟಿಸಿದ ಭಾರತ
ಬೆಂಗಳೂರು:ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರ ( 2024) ಪುರುಷರ ಹೈ ಜಂಪ್ ಟಿ 64 ಸ್ಪರ್ಧೆಯಲ್ಲಿ ಭಾರತದ ಪ್ರವೀಣ್‌ ಕುಮಾರ್‌ ಏಷ್ಯನ್ ಗೇಮ್ಸ್‌ ದಾಖಲೆ ಮುರಿದು ಚಿನ್ನದ ಪದಕ ಗೆದ್ದಿದ್ದಾರೆ. ಪ್ರವೀಣ್‌ ಹಿಂದಿನ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಈ ಮೂಲಕ ಸತತ ಎರಡು ಆವೃತ್ತಿಯಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಪ್ಯಾರಿಸ್‌ನಲ್ಲಿ ನಡೆದ ಫೈನಲ್‌ನಲ್ಲಿ 2.08 ಮೀಟರ್ ಎತ್ತರ ಜಿಗಿದು ಅಮೆರಿಕದ ಡೆರೆಕ್ ಲೊಕ್ಸಿಡೆಂಟ್ (2.06 ಮೀ) ಮತ್ತು ಉಜ್ಬೇಕಿಸ್ತಾನದ ತೆಮುರ್ಬೆಕ್ ಗಿಯಾಜೋವ್ (2.03 ಮೀ) ಅವರನ್ನು ಹಿಂದಿಕ್ಕಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಅಂದ ಹಾಗೆ ಪ್ಯಾರಿಸ್ ಭಾರತಕ್ಕೆ ಇದು ಆರನೇ ಪದಕವಾಗಿದೆ. ಇದಕ್ಕೂ ಮುನ್ನ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಐದು ಚಿನ್ನದ ಪದಕಗಳನ್ನು ಗೆದ್ದಿತ್ತು. ಹೀಗಾಗಿ ಭಾರತದ ಅಥ್ಲೀಟ್‌ಗಳು ಪ್ಯಾರಾಲಿಂಪಿಕ್ಸ್‌ನಲ್ಲಿ ಗರಿಷ್ಠ ಸಾಧನೆ ಮಾಡಿದಂತಾಗಿದೆ.
    🥇 #Paris2024with  '    2.08  🤯 # #👈###ParalympicsParis2024#../k6zLWLU9XD
ಭಾರತ ಈಗ ಒಟ್ಟು 26 ಪದಕಗಳನ್ನು ಗೆದ್ದುಕೊಂಡಿದೆ. ಅದರಲ್ಲಿ 6 ಚಿನ್ನದ ಪದಕವಾಗಿದ್ದರೆ 9 ಬೆಳ್ಳಿ ಹಾಗೂ 26 ಚಿನ್ನದ ಪದಕವನ್ನು ಗಳಿಸಿಕೊಂಡಿದೆ. ಪದಕ ಪಟ್ಟಿಯಲ್ಲಿ 14ನೇ ಸ್ಥಾನವನ್ನು ಹೊಂದಿಕೊಂಡಿದೆ.
ಮೊದಲಿಗೆ 1.89 ಮೀಟರ್  ಎತ್ತರದ ದೂರ ಜಿಗಿದ ಕುಮಾರ್ ವಿಶ್ವಾಸ ಮೂಡಿಸಿಕೊಂಡರು. ನಂತರ ಬಾರ್ ಅನ್ನು 2.10 ಮೀಟರ್ ಗೆ ಏರಿಸಲಾಯಿತು. ಕುಮಾರ್ ಮತ್ತು ಲೊಸಿಡೆಂಟ್ ಇಬ್ಬರೂ ವೇದಿಕೆಯಲ್ಲಿ ಅಗ್ರ ಸ್ಥಾನಕ್ಕಾಗಿ ಹೋರಾಡಿದರು. ಆದರೆ ಈ ಗುರಿ ದಾಟಲು ಸಾಧ್ಯವಾಗಲಿಲ್ಲ. ಆದಾಗ್ಯೂ 2023 ರ ವಿಶ್ವ ಚಾಂಪಿಯನ್‌ಶಿಪ್‌ ಕಂಚಿನ ಪದಕ ವಿಜೇತರ ಅಥ್ಲೀಟ್‌ ಪಾಲಿಗೆ ವೈಯಕ್ತಿಕ ಅತ್ಯುತ್ತಮ ಪ್ರದರ್ಶನವಾಗಿದೆ.
ಶುಕ್ರವಾರ ನಡೆದ ಪುರುಷರ ಎತ್ತರ ಜಿಗಿತ T64 ಫೈನಲ್‌ ಪಂದ್ಯದಲ್ಲಿ ಪ್ರವೀಣ್‌ ಕುಮಾರ್‌ 2.08 ಮೀ ದೂರ ಜಿಗಿದು ಚಿನ್ನ ಗೆದ್ದರು. ಇದು ಪ್ರವೀಣ್‌ ಗೆದ್ದ ಸತತ 2ನೇ ಪ್ಯಾರಾಲಿಂಪಿಕ್ಸ್‌ ಪದಕವಾಗಿದೆ. ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಅತ್ಯುತ್ತಮ 2.07 ಮೀಟರ್‌ಗಳೊಂದಿಗೆ ಬೆಳ್ಳಿ ಗೆದ್ದಿದ್ದರು. ಈ ಬಾರಿ ತಮ್ಮದೇ ದಾಖಲೆಯನ್ನು ಉತ್ತಮಪಡಿಸುದರ ಜತೆಗೆ ಏಷ್ಯನ್‌ ದಾಖಲೆಯೊಂದಿಗೆ ಚಿನ್ನ ಗೆದ್ದು ಸಂಭ್ರಮಿಸಿದರು. ಈ ಸಾಧನೆಯೊಂದಿಗೆ, ಪ್ರವೀಣ್ ಪ್ಯಾರಿಸ್‌ನಲ್ಲಿ ಪದಕ ಗೆದ್ದ ಮೂರನೇ ಭಾರತೀಯ ಹೈಜಂಪರ್ ಎನಿಸಿಮೊಂಡರು. ಇದಕ್ಕೂ ಮುನ್ನ ಶರದ್ ಕುಮಾರ್ ಬೆಳ್ಳಿ, ಮರಿಯಪ್ಪನ್ ತಂಗವೇಲು ಪುರುಷರ ಹೈಜಂಪ್ ಟಿ63 ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದರು.
ಇದನ್ನೂ ಓದಿ:  : ಪ್ಯಾರಾಲಿಂಪಿಕ್ಸ್‌ ಜೋಡೋದಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ಬರೆದ ಕಪಿಲ್ ಪರ್ಮಾರ್‌
ಉತ್ತರ ಪ್ರದೇಶದ ನೋಯ್ಡಾದ 21 ವರ್ಷದ ಅಥ್ಲೀಟ್ ಮರಿಯಪ್ಪನ್ ತಂಗವೇಲು ನಂತರ ಪ್ಯಾರಾಲಿಂಪಿಕ್ ಎತ್ತರ ಜಿಗಿತ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದ ಎರಡನೇ ಭಾರತೀಯರಾದರು. ಅಮೆರಿಕದ ಡೆರೆಕ್ ಲೊಸಿಡೆಂಟ್ 2.06 ಮೀ ಜಿಗಿತದೊಂದಿಗೆ ಬೆಳ್ಳಿ ಗೆದ್ದರೆ, ಉಜ್ಬೇಕಿಸ್ತಾನದ ತೆಮುರ್ಬೆಕ್ ಗಿಯಾಜೊವ್ 2.03 ಮೀ ಜಿಗಿತದೊಂದಿಗೆ ಕಂಚಿನ ಪದಕ ಪಡೆದರು. ಸದ್ಯ ಭಾರತ 26 ಪದಕ ಗೆದ್ದ ಸಾಧನೆ ಮಾಡಿದೆ. 6 ಚಿನ್ನ, 9 ಬೆಳ್ಳಿ ಮತ್ತು 11 ಕಂಚು ಒಳಗೊಂಡಿದೆ. ಇನ್ನೂ ಕೆಲ ಸ್ಫರ್ಧೆಯಲ್ಲಿ ಭಾರತೀಯ ಕ್ರೀಡಾಪಟುಗಳು ಪದಕ ಸುತ್ತಿಗೆ ಪ್ರವೇಶಿಸಿದ ಕಾರಣ 30ರ ಗಡಿ ದಾಟುವ ನಿರೀಕ್ಷೆ ಇದೆ.
ಗುರುವಾರ ನಡೆದಿದ್ದ ಜೂಡೋ ಪುರುಷರ 60 ಕೆಜಿ ಜೆ1 ವಿಭಾಗದಲ್ಲಿ ಭಾರತದ ಕಪಿಲ್‌ ಪರ್ಮಾರ್‌ ಕಂಚು ಗೆದ್ದಿದ್ದರು. ಈ ಮೂಲಕ ಪ್ಯಾರಾಲಿಂಪಿಕ್ಸ್‌ ಮತ್ತು ಒಲಿಂಪಿಕ್ಸ್‌ ಇತಿಹಾಸದಲ್ಲೇ ಜೂಡೋದಲ್ಲಿ ಭಾರತಕ್ಕೆ ಲಭಿಸಿದ ಚೊಚ್ಚಲ ಪದಕ ಗೆದ್ದ ಸಾಧನೆ ಮಾಡಿದ್ದರು. 24 ವರ್ಷದ ಮಧ್ಯಪ್ರದೇಶದ ಕಪಿಲ್‌ ಪರ್ಮಾರ್‌, ಇಪ್ಪಾನ್‌ ಕೌಶಲ ದಲ್ಲಿ ಎತ್ತಿದ ಕೈ. ಇದೇ ಕೌಶಲ ಬಳಸಿ ಕೊಂಡು ಗುರುವಾರ ಕೂಡ ಕಪಿಲ್‌ ಕೇವಲ 33 ಸೆಕೆಂಡ್‌ಗಳಲ್ಲೇ ಎದುರಾಳಿ ಎಲಿಯೆಲ್ಟನ್‌ ಅವರನ್ನು ಮಣಿಸಿ ಗಮನ ಸೆಳೆದಿದ್ದರು.