 : 3 ತಿಂಗಳ ಬಳಿಕ ಭಾರತಕ್ಕೆ ಬಂದ ವಿರಾಟ್‌ ಕೊಹ್ಲಿ
ಚೆನ್ನೈ:ಬಾಂಗ್ಲಾದೇಶ(  ) ವಿರುದ್ಧ ಸೆಪ್ಟೆಂಬರ್‌ 19 ರಿಂದ ಆರಂಭಗೊಳ್ಳಲಿರುವ ಮೊದಲ ಟೆಸ್ಟ್‌ ಪಂದ್ಯವನ್ನಾಡಲು ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ( ) ಅವರು ಲಂಡನ್‌ನಿಂದ ಚೆನ್ನೈಗೆ(   ) ಬಂದಿಳಿದಿದ್ದಾರೆ. ಕೊಹ್ಲಿ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವ ವಿಡಿಯೊ ವೈರಲ್‌ ಆಗಿದ್ದು, ಅವರ ಅಭಿಮಾನಿಗಳು ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡುತ್ತಾ ʼಕಿಂಗ್‌ ಈಸ್‌ ಬ್ಯಾಕ್‌ʼ ಎಂದು ಬರೆದುಕೊಂಡಿದ್ದಾರೆ.
ಜೂನ್‌ನಲ್ಲಿ ಮುಕ್ತಾಯ ಕಂಡಿದ್ದ ಟಿ20 ವಿಶ್ವಕಪ್‌ ಬಳಿಕ ಭಾರತಕ್ಕೆ ಬಂದಿದ್ದ ಕೊಹ್ಲಿ ಮುಂಬೈಯಲ್ಲಿ ನಡೆದಿದ್ದ ಅಭಿನಂದನಾ ಕಾರ್ಯಕ್ರಮ ಮುಗಿದ ದಿನದಂದೇ ಲಂಡನ್​ಗೆ ತೆರಳಿದ್ದರು. ಇದಾದ ಬಳಿಕ ಭಾರತಕ್ಕೆ ಆಗಮಿಸಿರಲಿಲ್ಲ. ಇದೀಗ ಸುಮಾರು 3 ತಿಂಗಳ ಬಳಿಕ ಭಾರತಕ್ಕೆ ಮರಳಿದ್ದಾರೆ. ವಿರಾಟ್​ ಕೊಹ್ಲಿ ಕಳೆದ ಇಂಗ್ಲೆಂಡ್​ ವಿರುದ್ಧದ ತವರಿನ ಟೆಸ್ಟ್​ ಸರಣಿ ವೇಳೆ ವೈಯಕ್ತಿಕ ಕಾರಣ ನೀಡಿ ಸರಣಿಯಿಂದ ಹಿಂದೆ ಸರಿದ್ದರು. ಕೊಹ್ಲಿ ಸರಿ ಸುಮಾರು 8 ತಿಂಗಳ ಬಳಿಕ ಆಡುತ್ತಿರುವ ಟೆಸ್ಟ್‌ ಸರಣಿ ಇದಾಗಿದೆ. ಕೊಹ್ಲಿ ಟೆಸ್ಟ್‌ನಲ್ಲಿ ಕೊನೆಯ ಬಾರಿಗೆ ಶತಕ ಬಾರಿಸಿದ್ದು ಕಳೆದ ವರ್ಷ ನಡೆದಿದ್ದ ವಿಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಇದಾದ ಬಳಿಕ ಅವರು ಶತಕ ಬಾರಿಸಿಲ್ಲ.
    . 👑– '    🐐    .../hFVsjEx93y
ಕೊಹ್ಲಿ ಬಾಂಗ್ಲಾದೇಶ ವಿರುದ್ಧ ಒಟ್ಟು ಆರು ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಒಂದು ಶತಕ ಮತ್ತು ದ್ವಿಶತಕ ಹಾಗೂ ಅರ್ಧಶತಕ ಬಾರಿಸಿ ಒಟ್ಟು 437 ರನ್‌ ಬಾರಿಸಿದ್ದಾರೆ. ಚೆನ್ನೈಯ ಚೆಪಾಕ್‌ ಮೈದಾನದಲ್ಲಿ ಕೊಹ್ಲಿ ಉತ್ತಮ ಬ್ಯಾಟಿಂಗ್‌ ದಾಖಲೆಯನ್ನು ಕೂಡ ಹೊಂದಿದ್ದಾರೆ. ಬಾಂಗ್ಲಾ ವಿರುದ್ಧ ಕೊಹ್ಲಿ 58ರನ್‌ ಬಾರಿಸಿದರೆ ದಿಗ್ಗಜ ಸಚಿನ್‌ ತೆಂಡೂಲ್ಕರ್‌( ) ದಾಖಲೆಯನ್ನು ಹಿಂದಿಕ್ಕಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯೊಂದನ್ನು ನಿರ್ಮಿಸಲಿದ್ದಾರೆ. ಜತೆಗೆ 147 ವರ್ಷಗಳ(147 ) ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ  : ಚೆನ್ನೈಗೆ ಆಗಮಿಸಿದ ಟೀಮ್‌ ಇಂಡಿಯಾ
           4     . 🥰❤️../82yvAsofJu
ಕೊಹ್ಲಿ 58 ರನ್‌ ಬಾರಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27,000 ರನ್ ಪೂರೈಸಲಿದ್ದಾರೆ. ಈ ಮೂಲಕ ಅತಿ ವೇಗವಾಗಿ ಈ ಸಾಧನೆಗೈದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸದ್ಯ ಈ ದಾಖಲೆ ಸಚಿನ್‌ ಹೆಸರಿನಲ್ಲಿದೆ. ಸದ್ಯ ವಿರಾಟ್‌ 591 ಇನ್ನಿಂಗ್ಸ್‌ಗಳಲ್ಲಿ 26,942 ರನ್ ಗಳಿಸಿದ್ದಾರೆ. ಕೊಹ್ಲಿ ಬಾಂಗ್ಲಾ ವಿರುದ್ಧ 58 ರನ್ ಗಳಿಸಿದರೆ 147 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ 600 ಕ್ಕಿಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 27,000 ರನ್‌ಗಳನ್ನು ತಲುಪಿದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ಇಲ್ಲಿಯವರೆಗೆ, ಸಚಿನ್ ಹೊರತುಪಡಿಸಿ, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮತ್ತು ಶ್ರೀಲಂಕಾದ ಕುಮಾರ ಸಂಗಕ್ಕಾರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.