 2024: ಶುಭಾರಂಭದ ನಿರೀಕ್ಷೆಯಲ್ಲಿ ಬೆಂಗಳೂರು ಎಫ್‌ಸಿ; ಈಸ್ಟ್‌ ಬೆಂಗಾಲ್‌ ಎದುರಾಳಿ
ಬೆಂಗಳೂರು:ಶುಕ್ರವಾರ ಆರಂಭಗೊಂಡ 11ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌ ಫುಟ್ಬಾಲ್‌ ಟೂರ್ನಿಯ( 2024) ಉದ್ಘಾಟನ ಪಂದ್ಯವಾದ ಮೋಹನ್‌ ಬಗಾನ್‌( ) ಹಾಗೂ ಮುಂಬೈ ಎಫ್‌ಸಿ(  ) ನಡುವಣ ಪಂದ್ಯ 2-2 ಗೋಲುಗಳ ಅಂತರದಿಂದ ಡ್ರಾ ಗೊಂಡಿತ್ತು. ಇಂದು ನಡೆಯುವ ಪಂದ್ಯದಲ್ಲಿ ಕನ್ನಡಿಗರ ನೆಚ್ಚಿನ ತಂಡವಾದ, ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ(    ) ಈಸ್ಟ್‌ ಬೆಂಗಾಲ್‌ ವಿರುದ್ಧ ಸೆಣಸಾಡಲಿದೆ. ಮೊದಲ ಪಂದ್ಯದಲ್ಲಿಯೇ ಗೆದ್ದು ಶೂಭಾರಂಭ ಮಾಡುವುದು ಸುನಿಲ್‌ ಚೆಟ್ರಿ ಪಡೆಯ ಯೋಜನೆಯಾಗಿದೆ. ಈ ಪಂದ್ಯ ನಗರದ ಕಂಠೀರವ ಕ್ರೀಡಾಂಗಣದಲ್ಲಿ ರಾತ್ರಿ 7.30ಕ್ಕೆ ಆರಂಭಗೊಳ್ಳಲಿದೆ.
ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಹೇಳಿ ಒತ್ತಡ ಕಡಿಮೆ ಮಾಡಿಕೊಂಡಿರುವ ಸುನಿಲ್‌ ಚೆಟ್ರಿ ಈ ಬಾರಿ ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ ಅಮೋಘ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ಬೆಂಗಳೂರು ತಂಡದಲ್ಲಿ ಈ ಬಾರಿ ಕೆಲ ಬದಲಾವಣೆ ಕೂಡ ಸಂಭವಿಸಿದೆ. ಕಳೆದ ಬಾರಿ ಕಳಪೆ ಪ್ರದರ್ಶನ ತೋರಿತ್ತು. ಆಡಿದ 22 ಪಂದ್ಯಗಳಲ್ಲಿ ಕೇವಲ 5ರಲ್ಲಿ ಮಾತ್ರ ಗೆಲುವು ಸಾಧಿಸಿ ಕೊನೆಯ 10ನೇ ಸ್ಥಾನಿಯಾಗಿತ್ತು.
🔥 𝗠𝗮𝘁𝗰𝗵 𝗗𝗮𝘆 ! 🔥         7:30    ! 🌟⚽       ?         ! 👇#####../5c2vL5u9yr
ಮುಖಾಮುಖಿ
ಬೆಂಗಳೂರು ಎಫ್‌ಸಿ ಮತ್ತು ಈಸ್ಟ್‌ ಬೆಂಗಾಲ್‌ ಇದುವರೆಗೆ ಇಂಡಿಯನ್‌ ಸೂಪರ್‌ ಲೀಗ್‌ ಫುಟ್ಬಾಲ್‌ ಟೂರ್ನಿಯಲ್ಲಿ ಒಟ್ಟು 16 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಬೆಂಗಳೂರು ತಂಡ 6 ತಂಡ ಗೆದ್ದಿದ್ದರೆ, ಬೆಂಗಾಲ್‌ ತಂಡ 9 ಪಂದ್ಯ ಗೆದ್ದಿದೆ. 1 ಪಂದ್ಯ ಡ್ರಾ ಗೊಂಡಿದೆ. ಬಲಾಬಲದ ಲೆಕ್ಕಾಚಾರದಲ್ಲಿ ಬೆಂಗಾಲ್‌ ತಂಡ ಬಲಿಷ್ಠವಾಗಿದೆ.
ಇದನ್ನೂ ಓದಿ : ಪಿ.ಟಿ. ಉಷಾ ವಿರುದ್ಧ ಗಂಭೀರ ಆರೋಪ ಮಾಡಿದ ವಿನೇಶ್‌
ಸಂಭಾವ್ಯ ತಂಡಗಳು
ಬೆಂಗಳೂರು ಎಫ್‌ಸಿ:ಗುರುಪ್ರೀತ್ ಸಿಂಗ್ ಸಂಧು (ಗೋಲ್‌ ಕೀಪರ್‌); ನಿಖಿಲ್ ಪೂಜಾರಿ, ರಾಹುಲ್ ಭೇಕೆ, ಅಲೆಕ್ಸಾಂಡರ್ ಜೊವಾನೋವಿಕ್, ನವೋರೆಮ್ ರೋಶನ್ ಸಿಂಗ್; ಸುರೇಶ್ ಸಿಂಗ್, ಪೆಡ್ರೊ ಕಾಪೊ, ಆಲ್ಬರ್ಟೊ ನೊಗುರಾ; ಶಿವಲ್ಡೊ ಸಿಂಗ್, ಶಿವಶಕ್ತಿ ನಾರಾಯಣನ್, ಜಾರ್ಜ್ ಪೆರೇರಾ ಡಯಾಜ್.
🔵🔴  . &   24/25 @../AH2NSFJYni
ಈಸ್ಟ್ ಬೆಂಗಾಲ್ ಎಫ್ ಸಿ:ಪ್ರಭುಸುಖಾನ್ ಗಿಲ್ (ಗೋಲ್‌ ಕೀಪರ್‌); ಪ್ರೊವತ್ ಲಾಕ್ರಾ, ಹಿಜಾಜಿ ಮಹೆರ್, ಲಾಲ್ಚುಂಗ್ನುಂಗಾ, ಮಾರ್ಕ್ ಝೋಥಾನ್ಪುಯಾ; ಜೆಕ್ಸನ್ ಸಿಂಗ್, ಸಾಲ್ ಕ್ರೆಸ್ಪೋ; ಮದಿಹ್ ತಲಾಲ್, ಪಿವಿ ವಿಷ್ಣು, ನಂದಕುಮಾರ್ ಸೇಕರ್; ಡಿಮಿಟ್ರಿಯೋಸ್ ಡೈಮಂಟಕೋಸ್.