  : ಬಾಂಗ್ಲಾ ಮಣಿಸಲು ರೆಡ್‌ ಪಿಚ್‌ ನಿರ್ಮಿಸಿದ ಭಾರತ
ಚೆನ್ನೈ:ಪ್ರವಾಸಿ ಬಾಂಗ್ಲಾದೇಶ(  ) ವಿರುದ್ಧದ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲು ಭಾರತ ತಂಡ ಸಜ್ಜಾಗಿದೆ. ಇತ್ತಂಡಗಳ ನಡುವಣ ಮೊದಲ ಟೆಸ್ಟ್‌ ಸೆಪ್ಟೆಂಬರ್‌ 19ರಿಂದ ಚೆನ್ನೈಯ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ(..  ) ಆರಂಭಗೊಳ್ಳಲಿದೆ. ಈಗಾಗಲೇ ಭಾರತೀಯ ಆಟಗಾರರು ಅಭ್ಯಾಸ ಕೂಡ ಶುರುಮಾಡಿದ್ದಾರೆ. ಈ ಪಂದ್ಯಕ್ಕೆ ಕೆಂಪು ಮಣ್ಣಿನ ಪಿಚ್‌ನಲ್ಲಿ( ) ನಡೆಯಲಿದೆ ಎಂದು ತಿಳಿದುಬಂದಿದೆ.
ಚಿದಂಬರಂ ಸ್ಟೇಡಿಯಂನಲ್ಲಿ  ಆತಿಥೇಯ ಭಾರತ ತಂಡದ ಮೇಲುಗೈಗೆ ಅನುಕೂಲಕರ ಎನಿಸುವಂಥ ಕೆಂಪು ಮಣ್ಣಿನ ಪಿಚ್​ ಸಿದ್ಧಪಡಿಸಲಾಗುತ್ತಿದೆ ಎಂದು ವರದಿಯಾಗಿದೆ. ಬಾಂಗ್ಲಾ ತಂಡ ತವರಿನಲ್ಲಿ ಕಪ್ಪು ಮಣ್ಣಿನ ಪಿಚ್​ನಲ್ಲಿ ಹೆಚ್ಚು ಆಡಿದ ಅನುಭವ ಹೊಂದಿದೆ. ಹೀಗಾಗಿ ಕೆಂಪು ಮಣ್ಣಿನ ಪಿಚ್​ಗೆ ಹೊಂದಿಕೊಳ್ಳುವುದು ಬಾಂಗ್ಲಾ ಪಾಲಿಗೆ ಸವಾಲೆನಿಸಲಿದೆ. ಹೀಗಾಗಿ ಕೆಂಪು ಮಣ್ಣಿನ ಪಿಚ್ ನಿರ್ಮಾಣ ಮಾಡಲಾಗುತ್ತಿದೆ ಎನ್ನಲಾಗಿದೆ.
ಈ ಪಿಚ್‌ ಯಾರಿಗೆ ಸಹಕಾರಿ
ಕೆಂಪು ಮಣ್ಣಿನ ಪಿಚ್​ ಮೊದಲಿಗೆ ವೇಗದ ಬೌಲರ್​ಗಳಿಗೆ ಹೆಚ್ಚಿನ ನೆರವು ಒದಗಿಸುತ್ತದೆ. ಕೆಂಪು ಮಣ್ಣಿನಲ್ಲಿ ಕಡಿಮೆ ಆವೆ ಅಂಶ ಇರುವುದರಿಂದ ಆರಂಭಿಕ ದಿನಗಳಲ್ಲಿ ಹೆಚ್ಚಿನ ಬೌನ್ಸ್​ ಕಂಡುಬರಲಿದೆ. ಆರಂಭದಲ್ಲಿ ವೇಗಿಗಳು ಮೇಲುಗೈ ಸಾಧಿಸಬಹುದು. ಆದರೆ ಬ್ಯಾಟರ್‌ಗಳು ರನ್‌ ಗಳಿಸಲು ತಿಣುಕಾಡಬೇಕು. ಪಿಚ್​ನಲ್ಲಿ ಬಿರುಕು ಕಾಣಿಸಿಕೊಂಡ ಬಳಿಕವಷ್ಟೇ ಸ್ಪಿನ್ನರ್​ಗಳಿಗೆ ಪಿಚ್​ ನೆರವಾಗುತ್ತದೆ.
      ! 🙌   #  ⏳#|@../F9Dcq0AyHi
ಶನಿವಾರದಂದು ನಾಯಕ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಕೆ.ಎಲ್‌ ರಾಹುಲ್‌ ಸೇರಿದಂತೆ, ಬಹುತೇಕ ಎಲ್ಲ ಆಟಗಾರರು ಬ್ಯಾಟಿಂಗ್‌ ಅಭ್ಯಾಸ ನಡೆಸಿದರೆ, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌, ಆರ್‌.ಅಶ್ವಿನ್‌, ಕುಲ್‌ದೀಪ್‌ ಪೂರ್ತಿ ಫಿಟ್‌ನೆಸ್‌ನೊಂದಿಗೆ ಬೌಲಿಂಗ್‌ ನಡೆಸಿ ಗಮನ ಸೆಳೆದರು.
ಇದನ್ನೂ ಓದಿ  : ಚೆಪಾಕ್‌ನಲ್ಲಿ ಕಠಿಣ ಅಭ್ಯಾಸ ನಡೆಸಿದ ಕೊಹ್ಲಿ, ಬುಮ್ರಾ
ಬಾಂಗ್ಲಾದ 6.3 ಅಡಿ ಎತ್ತರದ ಯುವ ವೇಗಿ ನಹಿದ್​ ರಾಣಾ ಇತ್ತೀಚೆಗೆ ರಾವಲ್ಪಿಂಡಿ ಟೆಸ್ಟ್​ನಲ್ಲಿ 5 ವಿಕೆಟ್​ ಕಬಳಿಸಿ ಆತಿಥೇಯ ಪಾಕಿಸ್ತಾನ ತಂಡವನ್ನು ಕಂಗೆಡಿಸಿದ್ದರು. ಹೀಗಾಗಿ ಭಾರತ ತಂಡವೂ ನಹಿದ್​ರನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಪಂಜಾಬ್​ನ 6.45 ಅಡಿ ಎತ್ತರದ ವೇಗಿ ಗುರ್​ನೂರ್​ ಬ್ರಾರ್​ ಎದುರು ಬ್ಯಾಟಿಂಗ್​ ಅಭ್ಯಾಸ ನಡೆಸುತ್ತಿದೆ.
      .@🦁../PhWJY2nAn4
ಬಾಂಗ್ಲಾದೇಶ ತಂಡ 2019ರಲ್ಲಿ ಭಾರತ ಪ್ರವಾಸ ಕೈಗೊಂಡಾಗಲೂ ಇಂದೋರ್​, ಕೋಲ್ಕತದಲ್ಲಿ ವೇಗದ ಬೌಲರ್​ಗಳಿಗೆ ನೆರವಾಗುವಂಥ ಕೆಂಪು ಮಣ್ಣಿನ ಪಿಚ್ ನಿರ್ಮಿಸಲಾಗಿತ್ತು. ಈ ಸಲವೂ ಅದೇ ಕಾರ್ಯತಂತ್ರ ಮುಂದುವರಿಸುವ ನಿರೀಕ್ಷೆ ಇದೆ. ಬಾಂಗ್ಲಾದೇಶ ತಂಡ ಇಂದು ಚೆನ್ನೈಗೆ ಆಗಮಿಸಲಾಗಿದೆ.