 : ದ್ರಾವಿಡ್‌ ದಾಖಲೆ ಮೇಲೆ ಕಣ್ಣಿಟ್ಟ ಕಿಂಗ್‌ ಕೊಹ್ಲಿ
ಬೆಂಗಳೂರು:ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆ ಬರೆದಿರುವ ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ( ) ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಮಾಜಿ ಆಟಗಾರ ರಾಹುಲ್‌ ದ್ರಾವಿಡ್‌( ) ಅವರ ದಾಖಲೆಯೊಂದನ್ನು ಮುರಿಯಲು ಸಜ್ಜಾಗಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶ(      ) ನಡುವಣ ಟೆಸ್ಟ್‌ ಸರಣಿಯಲ್ಲಿ ಅತ್ಯಧಿಕ ರನ್‌ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರಾಹುಲ್‌ ದ್ರಾವಿಡ್‌ 7 ಪಂದ್ಯವನ್ನಾಡಿ 560 ರನ್‌ ಬಾರಿಸಿ 3ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಇದುವರೆಗೆ 6 ಪಂದ್ಯಗಳಿಂದ 437* ರನ್‌ ಗಳಿಸಿದ್ದಾರೆ. ಈ ಬಾರಿಯ ಸರಣಿಯಲ್ಲಿ ಕೊಹ್ಲಿ ಒಟ್ಟು 124 ರನ್‌ ಗಳಿಸಿದರೆ ದ್ರಾವಿಡ್‌ ದಾಖಲೆ ಮುರಿದು ಮೂರನೇ ಸ್ಥಾನಕ್ಕೇರಲಿದ್ದಾರೆ.
    ###ViratKohli𓃵#../
820 ರನ್‌ ಬಾರಿಸಿರುವ ದಿಗ್ಗಜ ಆಟಗಾರ ಸಚಿನ್‌ ತೆಂಡೂಲ್ಕರ್‌ ಅಗ್ರಸ್ಥಾನದಲ್ಲಿದ್ದರೆ, ಬಾಂಗ್ಲಾದೇಶದ ಹಿರಿಯ ಆಟಗಾರ, ವಿಕೆಟ್ ಕೀಪರ್ ಮುಷ್ಫಿಕರ್ ರಹೀಮ್ 8 ಪಂದ್ಯಗಳನ್ನಾಡಿ 604 ರನ್‌ ಬಾರಿಸಿ ದ್ವಿತೀಯ ಸ್ಥಾನಿಯಾಗಿದ್ದಾರೆ. ಈ ಬಾರಿಯ ಸರಣಿಯಲ್ಲಿಯೂ ಅವರು ಆಡುತ್ತಿರುವ ಕಾರಣ ರನ್‌ ಗಳಿಕೆ ಹೆಚ್ಚಳ ಮಾಡಬಹುದು. ಸಚಿನ್‌ ದಾಖಲೆ ಮುರಿಯಬೇಕಿದ್ದರೆ ರಹೀಮ್‌ಗೆ 217 ರನ್‌ಗಳ ಅಗತ್ಯವಿದೆ.
     . 🔥../lD1tWoLXwe
ಭಾರತ-ಬಾಂಗ್ಲಾ ಟೆಸ್ಟ್‌ ಮುಖಾಮುಖಿ
ಭಾರತ ಮತ್ತು ಬಾಂಗ್ಲಾದೇಶ ಇದುವರೆಗೆ ಒಟ್ಟು 13 ಟೆಸ್ಟ್‌ ಪಂದ್ಯಗಳನ್ನು ಅಡಿದೆ. ಈ ಪೈಕಿ ಭಾರತ ಅಜೇಯ 11 ಗೆಲುವು ಸಾಧಿಸಿದೆ. 2 ಪಂದ್ಯ ಡ್ರಾ ಗೊಂಡಿದೆ. ಬಾಂಗ್ಲಾದೇಶ ಇದುವರೆಗೂ ಒಂದೇ ಒಂದು ಪಂದ್ಯ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಒಟ್ಟು ಇತ್ತಂಡಗಳು 8 ಟೆಸ್ಟ್‌ ಸರಣಿ ಆಡಿವೆ.
ಕೆಂಪು ಪಿಚ್‌ನಲ್ಲಿ ಪಂದ್ಯ
ಚಿದಂಬರಂ ಸ್ಟೇಡಿಯಂನಲ್ಲಿ ಆತಿಥೇಯ ಭಾರತ ತಂಡದ ಮೇಲುಗೈಗೆ ಅನುಕೂಲಕರ ಎನಿಸುವಂಥ ಕೆಂಪು ಮಣ್ಣಿನ ಪಿಚ್​ ಸಿದ್ಧಪಡಿಸಲಾಗಿದೆ. ಬಾಂಗ್ಲಾ ತಂಡ ತವರಿನಲ್ಲಿ ಕಪ್ಪು ಮಣ್ಣಿನ ಪಿಚ್​ನಲ್ಲಿ ಹೆಚ್ಚು ಆಡಿದ ಅನುಭವ ಹೊಂದಿದೆ. ಹೀಗಾಗಿ ಕೆಂಪು ಮಣ್ಣಿನ ಪಿಚ್​ಗೆ ಹೊಂದಿಕೊಳ್ಳುವುದು ಬಾಂಗ್ಲಾ ಪಾಲಿಗೆ ಸವಾಲೆನಿಸಲಿದೆ. ಕೆಂಪು ಮಣ್ಣಿನ ಪಿಚ್​ ಮೊದಲಿಗೆ ವೇಗದ ಬೌಲರ್​ಗಳಿಗೆ ಹೆಚ್ಚಿನ ನೆರವು ಒದಗಿಸುತ್ತದೆ. ಕೆಂಪು ಮಣ್ಣಿನಲ್ಲಿ ಕಡಿಮೆ ಆವೆ ಅಂಶ ಇರುವುದರಿಂದ ಆರಂಭಿಕ ದಿನಗಳಲ್ಲಿ ಹೆಚ್ಚಿನ ಬೌನ್ಸ್​ ಕಂಡುಬರಲಿದೆ. ಆರಂಭದಲ್ಲಿ ವೇಗಿಗಳು ಮೇಲುಗೈ ಸಾಧಿಸಬಹುದು. ಆದರೆ ಬ್ಯಾಟರ್‌ಗಳು ರನ್‌ ಗಳಿಸಲು ತಿಣುಕಾಡಬೇಕು. ಪಿಚ್​ನಲ್ಲಿ ಬಿರುಕು ಕಾಣಿಸಿಕೊಂಡ ಬಳಿಕವಷ್ಟೇ ಸ್ಪಿನ್ನರ್​ಗಳಿಗೆ ಪಿಚ್​ ನೆರವಾಗುತ್ತದೆ.