 : ನಿವೃತ್ತಿಯಾದರೂ 360 ಡಿಗ್ರಿಯಲ್ಲಿ ಬ್ಯಾಟ್‌ ಬೀಸಿದ ಶಿಖರ್ ಧವನ್
ಮುಂಬಯಿ:ಟೀಮ್‌ ಇಂಡಿಯಾ ಕಂಡ ಟ್ಯಾಲೆಂಟೆಡ್‌ ಎಡಗೈ ಬ್ಯಾಟರ್‌ ಶಿಖರ್‌ ಧವನ್‌ ( ) ಅವರು ಇತ್ತೀಗೆಚೆ ಅಂತಾರಾಷ್ಟ್ರೀಯ ಮತ್ತು ದೇಶಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಸಂದೇಶದ ಮೂಲಕ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದರು. ಇದೀಗ ಧವನ್‌ ಮುಂಬರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ ಟೂರ್ನಿಗೆ(  ) ಅಭ್ಯಾಸ ಆರಂಭಿಸಿದ್ದಾರೆ. ನೆಟ್ಸ್‌ನಲ್ಲಿ ಬ್ಯಾಟಿಂಗ್‌ ನಡೆಸುತ್ತಿರುವ ಫೋಟೊ ಮತ್ತು ವಿಡಿಯೊ ವೈರಲ್‌ ಆಗಿದೆ.
ಸೆಪ್ಟೆಂಬರ್ 20 ರಿಂದ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ವಿಶ್ವ ಕ್ರಿಕೆಟ್‌ನ ಅನೇಕ ದಿಗ್ಗಜ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಸುರೇಶ್ ರೈನಾ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಮತ್ತು ಜಹೀರ್ ಖಾನ್ ಸೇರಿದಂತೆ ಹಲವು ಟೀಮ್ ಇಂಡಿಯಾ ಆಟಗಾರರನ್ನು ಈ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಇದೀಗ ಧವನ್‌ ಕೂಡ ಸೇರ್ಪಡೆಗೊಂಡಿದ್ದಾರೆ. ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ನಿಂದ ನಿವೃತ್ತಿಯಾದರೂ ಕೂಡ ಧವನ್‌ ಐಪಿಎಲ್‌ನಲ್ಲಿ ತಮ್ಮ ಆಟ ಮುಂದುವರಿಸಲಿದ್ದಾರೆ. ಪ್ರಸ್ತುತ ಅವರು ಪಂಜಾಬ್‌ ಕಿಂಗ್ಸ್‌ ತಂಡದ ನಾಯಕನಾಗಿದ್ದಾರೆ. ಈ ಬಾರಿ ನಡೆಯುವ ಮೆಗಾ ಹರಾಜಿನಲ್ಲಿ ಅವರು ಯಾವ ತಂಡದ ಪಾಲಾಗಲಿದ್ದಾರೆ ಎಂದು ಕಾದು ನೋಡಬೇಕಿದೆ.
      ,         🙌📸:  /../
ಧವನ್ ನೆಟ್ಸ್‌ನಲ್ಲಿ 360 ಡಿಗ್ರಿಯಲ್ಲಿ, ರಿವರ್ಸ್ ಶಾಟ್ ಹೀಗೆ ಹಲವು ಕ್ರಿಕೆಟ್‌ ಶಾಟ್‌ಗಳನ್ನು ಹೊಡೆದು ಮಿಂಚಿದರು. ಧವನ್‌ ಬ್ಯಾಟಿಂಗ್‌ ಕಂಡು ಅವರ ಅಭಿಮಾನಿಗಳು ಕೂಡ ಸಂತಸಗೊಂಡಿದ್ದಾರೆ. ಗಬ್ಬರ್‌ ಈಸ್‌ ಬ್ಯಾಕ್‌ ಎಂದು ಕಮೆಂಟ್‌ ಮಾಡಿದ್ದಾರೆ.
ಇದನ್ನೂ ಓದಿ : ಪದಾರ್ಪಣ ಪಂದ್ಯದಲ್ಲೇ 10 ರನ್‌ಗೆ 4 ವಿಕೆಟ್‌ ಕಿತ್ತ ಟೀಮ್‌ ಇಂಡಿಯಾ ವೇಗಿ ಕ್ರಿಕೆಟ್‌ಗೆ ವಿದಾಯ
ಶಿಖರ್​ ಧವನ್​ ಅವರು ಭಾರತ ಪರ ಒಟ್ಟು 167 ಏಕದಿನ ಪಂದ್ಯಗಳನ್ನು ಆಡಿದ್ದು, 6793 ರನ್​ ಬಾರಿಸಿದ್ದಾರೆ. ಇದರಲ್ಲಿ 39 ಅಧರ್ಶತಕ ಮತ್ತು 17 ಶತಕ ಒಳಗೊಂಡಿದೆ. 143 ರನ್​ ಅವರ ಗರಿಷ್ಠ ಮೊತ್ತವಾಗಿದೆ. ಟೆಸ್ಟ್​ ಕ್ರಿಕೆಟ್​ನಲ್ಲಿ 34 ಪಂದ್ಯ ಆಡಿ 2315 ಗಳಿಸಿದ್ದಾರೆ. 7 ಶತಕ ಮತ್ತು 5 ಅರ್ಧಶತಕ ಒಳಗೊಂಡಿದೆ. ಟಿ20ಯಲ್ಲಿ ಉತ್ತಮ ದಾಖಲೆ ಹೊಂದಿರುವ ಧವನ್​ 68 ಪಂದ್ಯ ಆಡಿ 1759 ರನ್​ ಕಲೆಹಾಕಿದ್ದಾರೆ. 11 ಅರ್ಧಶತಕ ಬಾರಿಸಿದ್ದಾರೆ. ಶಿಖರ್‌ ಧವನ್‌ ಅವರು 2022ರಲ್ಲಿ ಬಾಂಗ್ಲಾದೇಶ ವಿರುದ್ದ ಕೊನೆಯದಾಗಿ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು.