ಅಗ್ರಸ್ಥಾನಿ ಡೆಲ್ಲಿ ಇಂದು ಗೆದ್ದರೆ ಪ್ಲೇಆಫ್ ಬರ್ತ್ ಖಚಿತ
ದುಬಾೖ: ಗೆಲುವಿನ ಹಳಿ ಏರುವ ಸೂಚನೆ ನೀಡಿರುವ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.
ಡೆಲ್ಲಿ ಗೆದ್ದರೆ ಮುಂದಿನ ಸುತ್ತು ಬಹುತೇಕ ಖಚಿತಗೊಳ್ಳಲಿದೆ. ಪಂಜಾಬ್‌ ಜಯಿಸಿದರೆ ಸ್ಪರ್ಧೆಯಲ್ಲಿ ಉಳಿಯಲಿದೆ. ಪಂಜಾಬ್‌ ಕಾಗದದಲ್ಲಿ ಬಲಿಷ್ಠ ತಂಡ. ಸ್ಟಾರ್‌ ಆಟಗಾರರನ್ನು ಕಾಣಬಹುದು. ಕೆ.ಎಲ್‌.ರಾಹುಲ್‌ (525 ರನ್‌) ಮತ್ತು ಮಾಯಾಂಕ್‌ ಅಗರ್ವಾಲ್‌ (393 ರನ್‌) ಹೊರತುಪಡಿಸಿ ಉಳಿದವರಿಂದ ಸ್ಥಿರವಾದ ಬ್ಯಾಟಿಂಗ್‌ ಪ್ರದರ್ಶನ ಕಂಡುಬಂದಿಲ್ಲ.
ಮ್ಯಾಕ್ಸ್‌ವೆಲ್‌ ಅವರಂತೂ ಬ್ಯಾಟಿಂಗನ್ನೇ ಮರೆತಂತಿದೆ. ನಿಕೋಲಸ್ ಪೂರನ್ ಆಗಾಗ ಸಿಡಿದರೂ ಮ್ಯಾಚ್‌ ವಿನ್ನರ್‌ ಆಗಿ ರೂಪು ಗೊಂಡಿಲ್ಲ. ಗೇಲ್‌ ಅವರಿಂದ ತಂಡದ ಬ್ಯಾಟಿಂಗ್‌ ಬಲ ಹೆಚ್ಚಿದೆ. ಮುಂಬೈ ವಿರುದ್ಧ ಸೂಪರ್‌ ಓವರ್‌ ನಲ್ಲಿ ಒಲಿದ ಜಯ ಪಂಜಾಬ್‌ ತಂಡದಲ್ಲಿ ಹೊಸ ಉತ್ಸಾಹ ಮೂಡಿಸಿದೆ.
ಎರಡೂ ತಂಡಗಳು 157 ರನ್‌ ಗಳಿಸಿದ ಬಳಿಕ ಡೆಲ್ಲಿ ಸೂಪರ್‌ ಓವರ್‌ನಲ್ಲಿ ಜಯಿಸಿತ್ತು. “ಸೈಲೆಂಟ್‌ ಕಿಲ್ಲರ್‌’ ಡೆಲ್ಲಿ ಅಗ್ರ ಕ್ರಮಾಂಕ ದಲ್ಲಿ ವೈಫ‌ಲ್ಯ ಕಾಣುತ್ತಿದೆ.