ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್’ಗೆ ಪಿತೃವಿಯೋಗ
ಮೇಲ್ಬರ್ನ್‌:ಆಸ್ಟ್ರೆಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ತಂದೆ ಸಾವಿಗೀಡಾಗಿದ್ದಾರೆ.
ಶ್ವಾಸಕೋಶದ ಕಾಯಿಲೆಯಿಂದ ನರಳುತ್ತಿದ್ದ ಸಿರಾಜ್ ತಂದೆ ಮೊಹಮ್ಮದ್ ಗೌಸ್ ಅವರಿಗೆ 53 ವರ್ಷ ವಯಸ್ಸಾಗಿತ್ತು.
ಆಸೀಸ್‌ ಪ್ರವಾಸದಲ್ಲಿರುವ ಪುತ್ರ, ಕ್ರಿಕೆಟರ್‌ ಮೊಹಮ್ಮದ್ ಸಿರಾಜ್ ಅವರು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತಂಡದ ಭಾಗವಾಗಿದ್ದಾರೆ. ಹಾಗೂ ಆಸ್ಟ್ರೇಲಿಯಾದಲ್ಲಿ ಕೊರೋನ ಕುರಿತ ನಿರ್ದಿಷ್ಟ ನಿಬಂಧನೆಗಳು ಇರುವುದರಿಂದ ಭಾರತಕ್ಕೆ ಮರಳಲು ಅಸಾಧ್ಯವೆಂದು ಹೇಳಲಾಗಿದೆ.