ಮೂರನೇ ಟಿ20 ಪಂದ್ಯ: ಟೀಂ ಇಂಡಿಯಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ
ಸಿಡ್ನಿ: ಮೊದಲೆರಡು ಪಂದ್ಯಗಳನ್ನು ಗೆದ್ದು ಟಿ20 ಸರಣಿ ವಶಪಡಿಸಿಕೊಂಡಿರುವ ಟೀಂ ಇಂಡಿಯಾ ಮಂಗಳವಾರ ಮೂರನೇ ಪಂದ್ಯ ಗೆದ್ದು ಸರಣಿಯನ್ನು ವೈಟ್ ವಾಶ್ ಮಾಡಲು ಕಾರ್ಯತಂತ್ರ ಹಣೆದಿದೆ.
ಸಿಡ್ನಿಯಲ್ಲಿ ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಕಳೆದ ಪಂದ್ಯದಂತೆ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
ಏಕದಿನ ಸರಣಿ ಗೆದ್ದು, ಟಿ20 ಸರಣಿ ಸೋತು ಮುಖಭಂಗ ಅನುಭವಿಸಿರುವ ಆಸೀಸ್‌ ಪಡೆಗೆ, ಕನಿಷ್ಠ ಈ ಪಂದ್ಯ ಗೆಲ್ಲುವ ಹವಣಿಕೆ ಯಲ್ಲಿದೆ. ಮೂರನೇ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ಆಸೀಸ್‌ ತಂಡಕ್ಕೆ ನಾಯಕ ಆರನ್‌ ಫಿಂಚ್‌ ಮರಳಿದ್ದು, ಮಾರ್ಕಸ್‌ ಸ್ಟೋಯಿನಿಸ್‌ ಹೊರಗುಳಿದಿದ್ದಾರೆ.
