ಬ್ರೇಕ್‌ಡ್ಯಾನ್‌ಗೆ ಅಧಿಕೃತ ಒಲಿಂಪಿಕ್ಸ್‌ ಕ್ರೀಡೆಯ ಮಾನ್ಯತೆ
ಜೆನೆವಾ:ಬ್ರೇಕ್‌ಡ್ಯಾನ್‌ಗೆ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಅಧಿಕೃತ ಒಲಿಂಪಿಕ್ಸ್‌ ಕ್ರೀಡೆಯ ಮಾನ್ಯತೆ ನೀಡಿದ್ದು, 2024 ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಸೆಣಸಾಟ ನಡೆಯಲಿದೆ.
ಇದರೊಂದಿಗೆ ಸ್ಕೇಟ್‌ ಬೋರ್ಡಿಂಗ್‌, ಸ್ಪೋರ್ಟ್‌ ಕ್ಲೈಬಿಂಗ್‌ ಮತ್ತು ಸರ್ಫಿಂಗ್‌ ಕೂಡ ಇರಲಿದೆ ಎಂದು ಐಎಂಸಿ ತಿಳಿಸಿದೆ.
ಟೊಕಿಯೊದಲ್ಲಿ ನಡೆಯಬೇಕಾಗಿದ್ದ ಒಲಂಪಿಕ್‌ ಕ್ರೀಡೆಗಳಲ್ಲಿ ಮೂರು ಕ್ರೀಡೆಗಳು ಪದಾರ್ಪಣೆಗೊಳ್ಳಬೇಕಾಗಿದ್ದವು. ಆದರೆ ಕೊರೊನಾ ಸೋಂಕಿನಿಂದಾಗಿ ಕಾರ್ಯಕ್ರಮವನ್ನು 2021 ಜುಲೈ 23ಕ್ಕೆ ಮುಂದೂಡಲಾಗಿದೆ.
ಬ್ರೇಕ್‌ ಡ್ಯಾನ್ಸಿಂಗ್ ಅನ್ನು ಒಲಂಪಿಕ್ಸ್‌ನಲ್ಲಿ ಬ್ರೇಕಿಂಗ್‌ ಎಂದು ಕರೆಯಲಾಗುವುದು. ಬ್ಯೂನಸ್ ಐರಿಸ್‌ನಲ್ಲಿ ನಡೆದ ಯುವ ಒಲಿಂಪಿಕ್ಸ್‌ನಲ್ಲಿ ಬ್ರೇಕ್‌ ಡ್ಯಾನ್ಸಿಂಗ್ ಪ್ರಯೋಗಗಳ ಬಳಿಕ ಪ್ಯಾರಿಸ್‌ ಆಯೋಜಕರು ಸಮಿತಿಗೆ ಪ್ರಸ್ತಾವನೆ ಸಲ್ಲಿಸಿದ್ದರು. 2019 ರಲ್ಲಿ ಅನುಮೋದನೆ ನೀಡಲಾಯಿತು.
