 : ಹಿಂದೂ ಯುವತಿಯನ್ನು ಮತಾಂತರಗೊಳಿಸಿ ನಿಶ್ಚಿತಾರ್ಥ ಮಾಡಿಕೊಂಡ ಪಾಕ್‌ ಕ್ರಿಕೆಟಿಗ
ಕರಾಚಿ:ಪಾಕಿಸ್ತಾನದ ಎಡಗೈ ಸ್ಪಿನ್ನರ್​ ರಾಜಾ ಹಸನ್ ( ) ಭಾರತೀಯ ಮೂಲದ ಹಿಂದು ಯುವತಿಯನ್ನು ವರಿಸುತ್ತಿದ್ದು​, ನಿಶ್ಚಿತಾರ್ಥದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇದೇ ವೇಳೆ ರಾಜಾ ಹಸನ್‌ ನೀಡಿದ ಹೇಳಿಕೆಯೊಂದು ಹಿಂದೂಗಳನ್ನು ಕೆರಳಿಸುವಂತೆ ಮಾಡಿದೆ.
ಮದುವೆ ವಿಚಾರವಾಗಿ ಪಾಕ್​ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರಾಜಾ ಹಸನ್, ʼನಾನು ಮದುವೆಯಾಗುವ ಯುವತಿ ಹಿಂದೂ () ಆಗಿದ್ದು, ಆಕೆ ಮದುವೆಗೆ ಮುನ್ನವೇ ಇಸ್ಲಾಂ (  ) ಧರ್ಮಕ್ಕೆ ಮತಾಂತರವಾಗಲಿದ್ದಾಳೆʼ ಎಂದು ಹೇಳಿದ್ದಾರೆ.
      (@razahassan_100)
ಅಂದಹಾಗೆ ರಾಜಾ ಹಸನ್​ ಮದುವೆಯಾಗುತ್ತಿರುವ ವಧುವಿನ ಹೆಸರು ಪೂಜಾ ಬೊಮನ್( )​. ಭಾರತೀಯ ಮೂಲದವರಾಗಿರುವ ಪೂಜಾ ಅಮೆರಿಕದಲ್ಲಿ ನೆಲೆಸಿದ್ದಾರೆ. ಮೂಲಗಳ ಪ್ರಕಾರ ಮುಂದಿನ ವರ್ಷದ ಆರಂಭದಲ್ಲಿ ಈ ಜೋಡಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ರಾಜಾ ಹಸನ್ ಕೂಡ​ ಪಾಕಿಸ್ತಾನವನ್ನು ತೊರೆದಿದ್ದು, ಸದ್ಯ ಅಮೆರಿಕದಲ್ಲಿ ವಾಸವಿದ್ದಾರೆ.
ಇದನ್ನೂ ಓದಿ  : ಪಾಕ್‌ ವಿರುದ್ಧ ಭಾರತಕ್ಕೆ ಮಸ್ಟ್‌ ವಿನ್‌ ಗೇಮ್‌
“ನಾನು ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ ಎಂದು ಹೇಳಿಕೊಳ್ಳಲು ನನಗೆ ಸಂತೋಷವಾಗಿದೆ! ನನ್ನ ಜೀವನದ ಪ್ರೀತಿ ಎಂದೆಂದಿಗೂ ನನ್ನದಾಗಲಿ ಎಂದು ನಾನು ಕೇಳಿದೆ, ಅದಕ್ಕೆ ಅವಳು ಸಮ್ಮತಿ ಸೂಚಿಸಿದಳುʼ ಎಂದು ರಾಜಾ ಹಸನ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಸಂಗಾತಿಯಾಗಲಿರುವ ಪೂಜಾ ಬೊಮನ್​ ಜತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.
ರಾಜಾ ಹಸನ್ ಪಾಕಿಸ್ತಾನ ತಂಡದ ಪರ 10 ಟಿ20 ಪಂದ್ಯಗಳನ್ನಾಡಿ 10 ವಿಕೆಟ್‌ ಮತ್ತು 18 ರನ್‌ ಬಾರಿಸಿದ್ದಾರೆ. ಏಕೈಕ ಏಕದಿನ ಪಂದ್ಯದಿಂದ1ವಿಕೆಟ್‌ ಪಡೆದಿದ್ದಾರೆ. ಪ್ರಥಮ ದರ್ಜೆ ಮತ್ತು ಲಿಸ್ಟ್‌ ಎ ಕ್ರಿಕೆಟ್‌ ಸೇರಿ ಒಟ್ಟು 271 ವಿಕೆಟ್‌ ಉರುಳಿಸಿದ್ದಾರೆ. 2014 ರಲ್ಲಿ ಪಾಕ್‌ ತಂಡದ ಪರ ಕೊನೆಯ ಬಾರಿಗೆ ಆಡಿದ್ದರು. ಇದಾದ ಬಳಿಕ ಅವರಿಗೆ ಸೂಕ್ತ ಅವಕಾಶ ಸಿಗಲಿಲ್ಲ.