 : ಕೋಚ್​ ಹುದ್ದೆಯಿಂದ ವಜಾಗೊಂಡಿಲ್ಲ; ದೊಡ್ಡ ಗಣೇಶ್‌ ಸ್ಪಷ್ಟನೆ
ಬೆಂಗಳೂರು:ಕೀನ್ಯಾ ರಾಷ್ಟ್ರೀಯ ಕ್ರಿಕೆಟ್‌( ) ತಂಡದ ಪ್ರಧಾನ ಕೋಚ್‌(  ) ಆಗಿ ಆಯ್ಕೆಯಾಗಿದ್ದ ಮಾಜಿ ವೇಗಿ, ಕನ್ನಡಿಗ ದೊಡ್ಡ ಗಣೇಶ್‌( ) ಅವರನ್ನು ಕೀನ್ಯಾ ಕ್ರಿಕೆಟ್‌ ಮಂಡಳಿ ಒಂದೇ ತಿಂಗಳಲ್ಲಿ ವಜಾಗೊಳಿಸಿದೆ ಎಂದು ಕೆಲ ದಿನಗಳ ಹಿಂದೆ ವರದಿಯಾಗಿತ್ತು. ಇದೀಗ ಈ ವಿಚಾರವಾಗಿ ದೊಡ್ಡ ಗಣೇಶ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶದಲ್ಲಿ ಸ್ಪಷ್ಟನೆ ನೀಡಿದ್ದು ತಾನು ಕೋಚ್​ ಹುದ್ದೆಯಿಂದ ವಜಾಗೊಂಡಿಲ್ಲ ಎಂದು ಹೇಳಿದ್ದಾರೆ.
ಗಣೇಶ್‌ ಅವರ ನೇಮಕ ಅಸಮರ್ಪಕವಾಗಿದೆ, ಕೆಲವು ಕಾರ್ಯ ವಿಧಾನಗಳನ್ನು ಅನುಸರಿಸಲಾಗಿಲ್ಲ, ಹೀಗಾಗಿ ಈ ನೇಮಕವನ್ನು ಕೀನ್ಯಾ ಕ್ರಿಕೆಟ್‌ ಕಾರ್ಯಕಾರಿ ಮಂಡಳಿ ಅನುಮೋದಿಸಲು ನಿರಾಕರಿಸಿದ್ದು ಗಣೇಶ್ ಅವರನ್ನು ಕೋಚ್‌ ಹುದ್ದೆಯಿಂದ ವಜಾಗೊಳಿಸಿದೆ ಎಂದು ಕಳೆದ ವಾರ ಸುದ್ದಿಯಾಗಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಗಣೇಶ್‌, ಕೀನ್ಯಾ ಕ್ರಿಕೆಟ್​ ಮಂಡಳಿಯಲ್ಲಿನ ಎರಡು ಬಣಗಳ ನಡುವಿನ ಮನಸ್ತಾಪದಿಂದಾಗಿ ಸದ್ಯ ಕೋಚ್​ ಹುದ್ದೆಯಿಂದ ಕೆಳಗಿಳಿದಿರುವೆ. ಆದರೆ ಕೀನ್ಯಾ ಕ್ರಿಕೆಟ್​ ಮಂಡಳಿ ಮುಂದಿನ ಕೆಲ ದಿನಗಳಲ್ಲಿ ಬಿಕ್ಕಟ್ಟು ಬಗೆಹರಿಸಿ ನನ್ನನ್ನು ಹುದ್ದೆಯಲ್ಲಿ ಮುಂದುವರಿಸುವ ಭರವಸೆ ನೀಡಿದೆ. ಸದ್ಯ ನಾನು ನೈರೋಬಿಯಲ್ಲೇ ಉಳಿದುಕೊಂಡಿರುವೆ. ಕೀನ್ಯಾ ಕ್ರಿಕೆಟ್​ ಮಂಡಳಿ ನನ್ನನ್ನು ಗೌರವದಿಂದಲೇ ನಡೆಸಿಕೊಳ್ಳುತ್ತಿದೆ ಎಂದು ಹೇಳುವ ಮೂಲಕ ಕೋಚ್‌ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆಯನ್ನು ತೆರೆದಿಟ್ಟಿದ್ದಾರೆ. ಆಗಸ್ಟ್​ 13ರಂದು ದೊಡ್ಡ ಗಣೇಶ್ ಕೀನ್ಯಾ ತಂಡದ ಮುಖ್ಯ ಕೋಚ್​ ಆಗಿ ನೇಮಕಗೊಂಡಿದ್ದರು.
           .://./
50 ವರ್ಷದ ದೊಡ್ಡ ಗಣೇಶ್ ನೇರ ನುಡಿಗಳಿಂದಲೇ ಹೆಸರುವಾಸಿ. 1997ರಲ್ಲಿ ಭಾರತ ಪರ 4 ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 104 ಪಂದ್ಯಗಳಿಂದ 365 ವಿಕೆಟ್​ ಪಡೆದಿದ್ದಾರೆ. ಭಾರತ ತಂಡದ ಪರ 6 ವಿಕೆಟ್​ ಕಿತ್ತಿದ್ದಾರೆ. ಲಿಸ್ಟ್​ ‘ಎ’ ಕ್ರಿಕೆಟ್​ನಲ್ಲಿ 89 ಪಂದ್ಯಗಳನ್ನಾಡಿ 128 ವಿಕೆಟ್​ ಪಡೆದಿದ್ದಾರೆ. ಬ್ಯಾಟಿಂಗ್​ನಲ್ಲಿಯೂ ಉತ್ತಮ ದಾಖಲೆ ಹೊಂದಿರುವ ಇವರು ಲಿಸ್ಟ್​ ‘ಎ’ ಮತ್ತು ಪ್ರಥಮ ದರ್ಜೆ ಕ್ರಿಕೆಟ್​ ಸೇರಿ ಒಟ್ಟು 2,548 ರನ್​ ಬಾರಿಸಿದ್ದಾರೆ. 6 ಬಾರಿ 10 ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ. 90ರ ದಶಕದಲ್ಲಿ ಭಾರತ ಮತ್ತು ಕರ್ನಾಟಕ ರಣಜಿ ತಂಡದಲ್ಲಿ ಉತ್ತಮ ಪ್ರದರ್ಶನ ತೋರಿದ ಹೆಗ್ಗಳಿಕೆ ಇವರದ್ದು.
ಇದನ್ನೂ ಓದಿ  : ದಿಗ್ಗಜರ ಜತೆ ಎಲೈಟ್‌ ಪಟ್ಟಿ ಸೇರಲು ಬುಮ್ರಾ ಸಜ್ಜು; 3 ವಿಕೆಟ್‌ ಅಗತ್ಯ
5 ತಿಂಗಳ ಹಿಂದಷ್ಟೇ ದೊಡ್ಡ ಗಣೇಶ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(. . ) ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು. ದೊಡ್ಡ ಗಣೇಶ್ ಮೊದಲು ವಿಕೆಟ್ ಕೀಪರ್ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಆಗಿ ವೃತ್ತಿಜೀವನ ಪ್ರಾರಂಭಿಸಿದರು. ಭಾರತದ 1983ರ ವಿಶ್ವಕಪ್ ವಿಜೇತ ವಿಕೆಟ್-ಕೀಪರ್ ಸೈಯದ್ ಕಿರ್ಮಾನಿ ಅವರನ್ನು ಆರಾಧ್ಯ ಕ್ರಿಕೆಟಿಗನಾಗಿ ಕಂಡುಕೊಂಡಿದ್ದರು. ಗುಂಡಪ್ಪ ವಿಶ್ವನಾಥ್ ಅವರು ದೊಡ್ಡ ಗಣೇಶ್ ಬೌಲಿಂಗ್ ಪ್ರತಿಭೆಯನ್ನು ಗುರುತಿಸಿ ಅವರಿಗೆ ಹಲವು ಕ್ಲಬ್​ಗಳ ಪರ ಆಡುವ ಅವಕಾಶ ಕಲ್ಪಿಸಿದ್ದರು ಎನ್ನಲಾಗಿದೆ.