‌  : ಅಜ್ಜಿಯ ಕ್ರಿಕೆಟ್‌ ಪ್ರೀತಿಗೆ ನೆಟ್ಟಿಗರು ಕ್ಲೀನ್‌ ಬೌಲ್ಡ್‌; ವಿಡಿಯೊ ವೈರಲ್
ಚೆನ್ನೈ:ಭಾರತ- ಬಾಂಗ್ಲಾ(  ) ನಡುವಿನ ಮೊದಲ ಟೆಸ್ಟ್‌ ಪಂದ್ಯದ ಮೊದಲ ದಿನ ವಿಶೇಷ ಆಕರ್ಷಣೆಯೊಂದಿಗೆ ಸುದ್ದಿಯಾಯಿತು. ದಿನಗಟ್ಟಲೇ ಕುಳಿತು ಟೆಸ್ಟ್‌ ಪಂದ್ಯವನ್ನು ನೋಡಲು ಹಿಂದೇಟು ಹಾಕುವ ಯುವ ಅಭಿಮಾನಿಗಳ ಮಧ್ಯೆ ಅಜ್ಜಿಯೊಬ್ಬರು ಜೋಶ್‌ ತೋರಿದ ವಿಡಿಯೊ ನೆಟ್ಟಿಗರ ಗಮನಸೆಳೆದಿದೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.
ಭಾರತ ತಂಡದ ಆಟಗಾರರು ಬೌಂಡರಿ, ಸಿಕ್ಸರ್‌ ಬಾರಿಸುತ್ತಿದ್ದಾಗ ಆಗಾಗ ಎದ್ದು ನಿಂತು, ಗಾಳಿಯಲ್ಲಿ ಕೈಬೀಸುತ್ತ,  ಅತಿಯಾದ ಸಂಭ್ರಮದೊಂದಿಗೆ ಆಟಗಾರರನ್ನು ಹುರಿದುಂಬಿಸುತ್ತಿದ್ದ ದೃಶ್ಯ ನಿಜಕ್ಕೂ ಅಪರೂಪದ್ದಾಗಿತ್ತು. ಅದರಲ್ಲೂ ಆರ್‌.ಅಶ್ವಿನ್‌( ’ ) ಅವರು ಶತಕ ಬಾರಿಸಿದಾಗ ಕೈಯಲ್ಲಿ ಟೀ ಕಪ್‌ ಇದ್ದರೂ ಕೂಡ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿದ್ದಾರೆ. ಅಜ್ಜಿಯ ಕ್ರಿಕೆಟ್‌ ಪ್ರೀತಿಗೆ ಬಿಸಿಸಿಐ ಮತ್ತು ನೆರೆದಿದ್ದ ಪ್ರೇಕ್ಷಕರು ಕ್ಲೀನ್ ಬೌಲ್ಡ್‌‌ ಆಗಿದ್ದಾರೆ.
  @ashwinravi99across ! 👏👏 –://./jV4wK7BgV2…#@../SsE9w5VV4u
ಶತಕ ಗಳಿಸಿದ್ದ ಅಶ್ವಿನ್‌ ದ್ವಿತೀಯ ದಿನದಾಟದಲ್ಲಿ 11 ರನ್‌ ಗಳಿಸಿ ಒಟ್ಟು 113 ರನ್‌ ಬಾರಿಸಿ ವಿಕೆಟ್‌ ಕಳೆದುಕೊಂಡರು. 86 ರನ್‌ ಗಳಿಸಿದ್ದ ಜಡೇಜಾ ಇದೇ ಮೊತ್ತಕ್ಕೆ ವಿಕೆಟ್‌ ಕೈಚೆಲ್ಲಿದರು. ಆಕಾಶ್‌ ದೀಪ್‌ 17 ರನ್‌ ಬಾರಿಸಿದರೆ, ಜಸ್‌ಪ್ರೀತ್‌ ಬುಮ್ರಾ 7 ರನ್‌ ಗಳಿಸಿದರು. ಘಾತಕ ವೇಗಿ ಹಸನ್‌ ಮಹಮೂದ್‌ 5 ವಿಕೆಟ್‌ ಕಿತ್ತು ಮಿಂಚಿದರು. ಇದೇ ವೇಳೆ ಭಾರತ ವಿರುದ್ಧ ಟೆಸ್ಟ್‌ನಲ್ಲಿ 5 ವಿಕೆಟ್‌ ಕಿತ್ತ ಬಾಂಗ್ಲಾದ ಮೊದಲ ಬೌಲರ್‌ ಎನಿಸಿಕೊಂಡರು. ಟಸ್ಕಿನ್‌ ಅಹ್ಮದ್‌ 3 ವಿಕೆಟ್‌ ಕಿತ್ತರು. ಭಾರತ 376 ರನ್‌ ಗಳಿಸಿ ಆಲೌಟ್‌ ಆಗಿದೆ. ಮೊದಲ ಇನಿಂಗ್ಸ್‌ ಆರಂಭಿಸಿರುವ ಬಾಂಗ್ಲಾ 26 ರನ್‌ಗೆ 3 ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿದೆ. ಜಸ್‌ಪ್ರೀತ್‌ ಬುಮ್ರಾ ಮೊದಲ ಓವರ್‌ನಲ್ಲಿಯೇ ವಿಕೆಟ್‌ ಕಿತ್ತು ಬಾಂಗ್ಲಾಗೆ ಶಾಕ್‌ ಕೊಟ್ಟರೆ, ಯುವ ವೇಗಿ ಆಕಾಶ್‌ ದೀಪ್‌ ಸತತ 2 ವಿಕೆಟ್‌ ಕಿತ್ತು ಅವಳಿ ಆಘಾತವಿಕ್ಕಿದರು.
ಇದನ್ನೂ ಓದಿ  : 376 ರನ್‌ಗೆ ಭಾರತ ಆಲೌಟ್‌
ಯಶಸ್ವಿ ಜೈಸ್ವಾಲ್( ) ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸುವ ಮೂಲಕ ಐತಿಹಾಸಿಕ ದಾಖಲೆಯೊಂದನ್ನು ಮಾಡಿದ್ದಾರೆ. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಸ್ವದೇಶದಲ್ಲಿ ಆಡಿರುವ ತನ್ನ ಮೊದಲ 10 ಇನಿಂಗ್ಸ್‌ಗಳಿಂದ 750ಕ್ಕೂ ಅಧಿಕ ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಜೈಸ್ವಾಲ್‌ಗೂ ಮುನ್ನ ಈ ವಿಶ್ವ ದಾಖಲೆ ವೆಸ್ಟ್‌ಇಂಡೀಸ್‌ನ ಮಾಜಿ ಆಟಗಾರ ಜಾರ್ಜ್ ಹೆಡ್ಲಿ ಹೆಸರಲ್ಲಿತ್ತು. ಹೆಡ್ಲಿ 1935ರಲ್ಲಿ 747 ರನ್ ಗಳಿಸಿದ್ದರು. ಇದೀಗ 89 ವರ್ಷಗಳ ಬಳಿಕ ಈ ದಾಖಲೆ ಪತನಗೊಂಡಿದೆ. ಜೈಸ್ವಾಲ್‌ ಬಾಂಗ್ಲಾ ವಿರುದ್ಧ 118 ಎಸೆತ ಎದುರಿಸಿ 56 ರನ್‌ ಬಾರಿಸಿ ನಹಿದ್ ರಾಣಾಗೆ ವಿಕೆಟ್‌ ಒಪ್ಪಿಸಿದರು.