ಟೀಂ ಇಂಡಿಯಾ 336 ರನ್ನುಗಳಿಗೆ ಆಲೌಟ್‌
ಬ್ರಿಸ್ಬೇನ್‌:ಗಬ್ಬಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೀಂ ಇಂಡಿಯಾ ಪ್ರಥಮ ಇನ್ನಿಂಗ್ಸ್‌’ನಲ್ಲಿ 336 ರನ್ನುಗಳಿಗೆ ಆಲೌಟಾಗಿದೆ.
ಈ ಮೂಲಕ ಆಸೀಸ್‌ 33 ರನ್ನುಗಳ ಮುನ್ನಡೆ ದಾಖಲಿಸಿದೆ. ಮೊದಲ ಇನ್ನಿಂಗ್ಸ್’ನಲ್ಲಿ ಆತಿಥೇಯ ತಂಡ 369ರನ್ನುಗಳಿಗೆ ಆಲೌಟಾಗಿದೆ. ವೇಗಿ ಹ್ಯಾಜಲ್‌ವುಡ್‌ ಐದು ವಿಕೆಟ್‌ ಪಡೆದು ಮಿಂಚಿದರು.
ಭಾರತದ ಮೊದಲ ಇನ್ನಿಂಗ್ಸ್ ಅಗ್ರ ಕ್ರಮಾಂಕದ ಆಟಗಾರರು ಅರ್ಧಶತಕದ ಮೊತ್ತದೊಳಗೆ ತಮ್ಮಾಟ ಮುಗಿಸಿದರೆ, ಕಳೆ ತಂದವರು ವಾಷಿಂಗ್ಟನ್‌ ಸುಂದರ್‌ ಹಾಗೂ ಶಾರ್ದೂಲ್‌ ಠಾಕೂರ್‌. ಇಬ್ಬರು ಅರ್ಧಶತಕ ಬಾರಿಸಿ, ಅಸೀಸ್‌ ತಂಡಕ್ಕೆ ಕಂಟಕ ಪ್ರಾಯವಾದರು.
ಆದರೆ, ವೇಗಿಗಳಾದ ಸ್ಟಾರ್ಕ್‌ ಹಾಗೂ ಕಮ್ಮಿನ್ಸ್‌ ಶಾರ್ದೂಲ್‌ ಠಾಕೂರ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ವಿಕೆಟ್‌ ಉರುಳಿಸಿ, ತಂಡಕ್ಕೆ ಮೇಲುಗೈ ಒದಗಿಸಿಕೊಟ್ಟರು.
