ಚೆನ್ನೈ ಸೂಪರ್ ಕಿಂಗ್ಸ್ ಒಪ್ಪಂದ ಅಂತ್ಯಗೊಳಿಸಿದ ’ಟರ್ಬನೇಟರ್‌’
ಮುಂಬೈ:ಚೆನ್ನೈ ಸೂಪರ್ ಕಿಂಗ್ಸ್ ಜೊತೆಗಿನ ಒಪ್ಪಂದವನ್ನು ಹರ್ಭಜನ್ ಸಿಂಗ್ ಕೊನೆಗೊಳಿಸಿದ್ದಾರೆ. ಈ ಬಗ್ಗೆ ಟರ್ಬನೇಟರ್‌ ಖ್ಯಾತಿಯ ಹರ್ಭಜನ್ ಟ್ವೀಟ್‌ ಮಾಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಒಪ್ಪಂದ ಮುಗಿದಿದೆ ಎಂದು ಹರ್ಭಜನ್ ಸಿಂಗ್ ಟ್ವೀಟ್‌ ಮಾಡಿದ್ದಾರೆ. ಈ ತಂಡದೊಂದಿಗೆ ಆಡಿರು ವುದು ಉತ್ತಮ ಅನುಭವ. ಸುಂದರವಾದ ನೆನಪುಗಳು ಮತ್ತು ಕೆಲವು ಅದ್ಭುತ ಸ್ನೇಹಿತರನ್ನು ಮುಂದಿನ ವರ್ಷಗಳಲ್ಲಿ ನಾನು ನೆನಪಿಸಿಕೊಳ್ಳುತ್ತೇನೆ. ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್, ಸಿಬ್ಬಂದಿ ಮತ್ತು ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಟ್ವಿಟ್ ಮಾಡಿದ್ದಾರೆ.
ಐಪಿಎಲ್ 2020 ರಲ್ಲಿ ಹರ್ಭಜನ್ ಸಿಂಗ್ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದರು. ಐಪಿಎಲ್ ಲೀಗ್‌ನಲ್ಲಿ ಹರ್ಭಜನ್ ಸಿಂಗ್ 150 ವಿಕೆಟ್‌ ಪಡೆದಿದ್ದಾರೆ.