 : ಪಂತ್ ಜತೆ ಡೇಟಿಂಗ್; ಮೌನ ಮುರಿದ ಊರ್ವಶಿ ರೌಟೇಲಾ
ಮುಂಬಯಿ:ಟೀಮ್​ ಇಂಡಿಯಾದ ಸ್ಟಾರ್​ ವಿಕೆಟ್​ ಕೀಪರ್​ ಕಮ್​ ಬ್ಯಾಟರ್​ ರಿಷಭ್​ ಪಂತ್( )​ ಮತ್ತು ಬಾಲಿವುಡ್ ನಟಿ ಊರ್ವಶಿ ರೌಟೇಲಾ( ) ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೆಲ ವರ್ಷಗಳ ಹಿಂದೆ ಬಾರೀ ಸದ್ದು ಮಾಡಿತ್ತು. ಇದೀಗ ಈ ವಿಚಾರದಲ್ಲಿ ಸ್ವತಃ ಊರ್ವಶಿ ರೌಟೇಲಾ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಪಂತ್‌ ಜತೆ ಡೇಟಿಂಗ್‌ ಸುದ್ದಿ ಸುಳ್ಳು ಎಂದು ಎಂದು ಹೇಳಿದ್ದಾರೆ.
‘ಪಂತ್‌ ಮತ್ತು ನನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮೀಮ್ಸ್‌ಗಳು ಆಧಾರರಹಿತ ಮಾಹಿತಿ. ಅಂತಹ ನಿರಂತರ ವದಂತಿಗಳ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ.  ನನ್ನ ವೈಯಕ್ತಿಕ ಜೀವನವನ್ನು ಖಾಸಗಿಯಾಗಿಡಲು ನಾನು ಇಷ್ಟಪಡುತ್ತೇನೆ. ನನ್ನ ಗಮನವು ನನ್ನ ವೃತ್ತಿ ಮತ್ತು ನಾನು ಆಸಕ್ತಿ ಹೊಂದಿರುವ ಕೆಲಸದ ಮೇಲೆ. ಅಂತಹ ವಿಷಯಗಳನ್ನು ಪಾರದರ್ಶಕತೆಯೊಂದಿಗೆ ಪರಿಹರಿಸುವುದು ಮತ್ತು ಊಹಾಪೋಹಗಳಿಗಿಂತ ಸತ್ಯದ ಮೇಲೆ ಕೇಂದ್ರೀಕರಿಸುವುದು ಮುಖ್ಯವಾಗಿದೆ. ಮೀಮ್ ಮೆಟೀರಿಯಲ್ ಪೇಜ್‌ಗಳು ಏಕೆ ತುಂಬಾ ಉತ್ಸುಕವಾಗುತ್ತವೆ ಎಂದು ನನಗೆ ಅರ್ಥವಾಗುತ್ತಿಲ್ಲʼ ಎಂದು ಊರ್ವಶಿ ರೌಟೇಲಾ ಎನ್‌ಡಿಟಿವಿ ಜತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.
     😅#../SXPlY85KPl
ರಿಷಭ್​ ಪಂತ್ ಮತ್ತು ಊರ್ವಶಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೆಲ ವರ್ಷಗಳ ಹಿಂದೆ ಬಾರೀ ಸದ್ದು ಮಾಡಿತ್ತು. ಇದೇ ವೇಳೆ ಊರ್ವಶಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡುವಾಗ ರಿಷಭ್‌ ಪಂತ್ ನನ್ನ ಭೇಟಿ ಮಾಡಲು ಹಲವು ಗಂಟೆ ಕಾದಿದ್ದರು ಎಂದಿದ್ದರು. ಈ ಬಗ್ಗೆ ರಿಷಭ್‌ ನಟಿಗೆ ಖಡಕ್ ತಿರುಗೇಟು ನೀಡಿದ್ದರು. ಇದೇ ವಿಚಾರವಾಗಿ ಇವರಿಬ್ಬರ ಮಧ್ಯೆ ಟ್ವೀಟ್​ ವಾರ್​ ಕೂಡ ನಡೆದಿತ್ತು. ಈ ಘಟನೆ ನಡೆದ ಬಳಿಕ ಇವರಿಬ್ಬರು ಬ್ರೇಕಪ್​ ಆಗಿದ್ದಾರೆ ಎನ್ನಲಾಗಿತ್ತು. ಈ ಜೋಡಿ ತಮ್ಮಿಬ್ಬರ ಮಧ್ಯೆ ಯಾವುದೇ ಸಂಬಂಧವಿಲ್ಲ ಎಂದು ಹಲವು ಬಾರಿ ಹೇಳಿದ್ದರೂ ಕೂಡ ನೆಟ್ಟಿಗರು ಮಾತ್ರ ಆಗಾಗಾ ಒಂದಲ್ಲ ಒಂದು ವಿಚಾರವಾಗಿ ಇವರಿಬ್ಬರ ಬಗ್ಗೆ ಚರ್ಚೆಗಳನ್ನು ಮಾಡುತ್ತಲೇ ಇದ್ದಾರೆ. ಇದು ಸರಿಯಲ್ಲ ಎನ್ನುವುದು ಊರ್ವಶಿ ಅವರ ಅಭಿಪ್ರಾಯವಾಗಿದೆ.
ಇದನ್ನೂ ಓದಿ : ಗಂಗೂಲಿ ಸಿಕ್ಸರ್‌ ದಾಖಲೆ ಮುರಿದ ಪಂತ್‌
               😵 @#../1Ps5s3xvk2
ಹಿಂದೊಮ್ಮೆ ಪಾಡ್‌ಕಾಸ್ಟ್‌ವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಭಿಮಾನಿಗಳು ಊರ್ವಶಿಗೆ ʻರಿಷಭ್‌ ಪಂತ್ ನಿಮ್ಮನ್ನು ತುಂಬಾ ಗೌರವಿಸುತ್ತಾರೆ, ತುಂಬಾ ಚೆನ್ನಾಗಿಯೂ ನೋಡಿಕೊಳ್ಳುತ್ತಾರೆ, ನೀವು ಅವರನ್ನು ಮದುವೆಯಾಗಬೇಕು ಅನ್ನೋದು ನಮ್ಮ ಬಯಕೆ, ಇದಕ್ಕೆ ಏನಂತೀರಾ?ʼ ಎಂದು ನೆಟ್ಟಿಗನ ಪ್ರಶ್ನೆಯೊಂದನ್ನು ಪ್ರಸ್ತಾಪಿಸಿದ್ದರು. ಆದರೆ ಊರ್ವಶಿ ಇದಕ್ಕೆ ನೋ ಕಾಮೆಂಟ್ಸ್‌ ಎಂದು ಮದುವೆ ಪ್ರಸ್ತಾವವನ್ನು ತಿರಸ್ಕರಿಸಿದ್ದರು.