  : ಕೊಹ್ಲಿಯ ದಾಖಲೆ ಮುರಿದ ಶುಭಮನ್‌ ಗಿಲ್‌
ಚೆನ್ನೈ:ಟೆಸ್ಟ್‌ನಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಕಂಡು ಭಾರೀ ಟೀಕೆಗೆ ಗುರಿಯಾಗಿದ್ದ ಯುವ ಆಟಗಾರ ಶುಭಮನ್‌ ಗಿಲ್‌( ) ಬಾಂಗ್ಲಾದೇಶ(  ) ವಿರುದ್ಧದ ಮೊದಲ ಟೆಸ್ಟ್‌ನ ದ್ವಿತೀಯ ಇನಿಂಗ್ಸ್‌ನಲ್ಲಿ ಅಮೋಘ ಶತಕ ಬಾರಿಸುವ ಮೂಲಕ ಮತ್ತೆ ಬ್ಯಾಟಿಂಗ್‌ ಫಾರ್ಮ್‌ಗೆ ಮರಳಿದ್ದಾರೆ. ಜತೆಗೆ ತಮ್ಮ ವಿರುದ್ಧ ಟೀಕೆ ಮಾಡುತ್ತಿದ್ದವರಿಗೆ ಈ ಪ್ರದರ್ಶನದ ಮೂಲಕ ತಕ್ಕ ಉತ್ತರ ಕೊಟ್ಟಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಗಿಲ್‌ ಶೂನ್ಯ ಸುತ್ತಿದ್ದರು. ಶತಕ ಬಾರಿಸುವ ಮೂಲಕ ವಿರಾಟ್‌ ಕೊಹ್ಲಿಯ( ) ಹೆಸರಿನಲ್ಲಿದ್ದ ದಾಖಲೆಯನ್ನು ಕೂಡ ಮುರಿದಿದ್ದಾರೆ.
ಶುಭಮನ್‌ ಗಿಲ್‌ 176 ಎಸೆತಗಳಿಂದ 10 ಬೌಂಡರಿ ಮತ್ತು 4 ಸಿಕ್ಸರ್‌ ಸಿಡಿಸಿ ಅಜೇಯ 119ರನ್‌ ಬಾರಿಸಿದರು. ಇದು ಗಿಲ್‌ ಅವರ 5ನೇ ಟೆಸ್ಟ್‌ ಶತಕವಾಗಿದೆ. ಈ ಶತಕದೊಂದಿಗೆ ಶುಭಮನ್‌ ಗಿಲ್‌ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಕೂಟದಲ್ಲಿ ಅತ್ಯಧಿಕ ಶತಕ ಬಾರಿಸಿದ 2ನೇ ಭಾರತೀಯ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಇದುವರೆಗೆ ಈ ದಾಖಲೆ ಕಿಂಗ್‌ ಖ್ಯಾತಿಯ ವಿರಾಟ್‌ ಕೊಹ್ಲಿ(4 ಶತಕ) ಹೆಸರಿನಲ್ಲಿತ್ತು. ಅಗ್ರಸ್ಥಾನದಲ್ಲಿ ನಾಯಕ ರೋಹಿತ್‌ ಶರ್ಮ ಕಾಣಿಸಿಕೊಂಡಿದ್ದಾರೆ. ರೋಹಿತ್‌ 9 ಶತಕ ಬಾರಿಸಿದ್ದಾರೆ. ಒಟ್ಟಾರೆ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಇಂಗ್ಲೆಂಡ್‌ನ ಜೋ ರೂಟ್‌ಗೆ ಸಲ್ಲುತ್ತದೆ. ರೂಟ್‌ 16 ಶತಕ ಬಾರಿಸಿದ್ದಾರೆ.
    @     5th   👏👏 –://./…#@../W4d1GmuukB
ರೋಹಿತ್‌ ಶರ್ಮ-9 ಶತಕ
ಶುಭಮನ್‌ ಗಿಲ್‌-5 ಶತಕ
ವಿರಾಟ್‌ ಕೊಹ್ಲಿ-4 ಶತಕ
ಮಯಾಂಕ್‌ ಅಗರ್ವಾಲ್‌-4 ಶತಕ
ರಿಷಭ್‌ ಪಂತ್‌-4 ಶತಕ
ಇದನ್ನೂ ಓದಿ  : ಪಂತ್‌-ಗಿಲ್‌ ಶತಕ; 287ಕ್ಕೆ ಭಾರತ ಡಿಕ್ಲೇರ್‌
25ರ ಹರೆಯದ ಗಿಲ್‌ ಬಾಂಗ್ಲಾದೇಶ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಡಕ್‌ಗೆ ಔಟಾದ ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಈ ಪ್ರದರ್ಶನದ ಮೂಲಕ ಟೆಸ್ಟ್‌ನಲ್ಲಿ 3ನೇ ಕ್ರಮಾಂಕದ ಬ್ಯಾಟಿಂಗ್ ಸ್ಥಾನಕ್ಕೆ ತಾವೇ ಸೂಕ್ತ ಎಂದು ಸಾಬೀತುಪಡಿಸಿದ್ದಾರೆ. 2024 ರ ಕ್ಯಾಲೆಂಡರ್ ವರ್ಷದಲ್ಲಿ ಭಾರತೀಯ ಬ್ಯಾಟರ್‌ಗಳಿಸಿದ ಅತಿ ಹೆಚ್ಚು ರನ್‌ಗಳ ಪಟ್ಟಿಯಲ್ಲಿ ಶುಭಮನ್ ಗಿಲ್ ಅಗ್ರಸ್ಥಾನಕ್ಕೆ ಏರಿದ್ದಾರ. ಈ ಮೂಲಕ ನಾಯಕ ರೋಹಿತ್ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಹಿಂದಿಕ್ಕಿದ್ದಾರೆ.
    ,  ! 🙌🏻💯####../C4gJuv29Y1
ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಪಂತ್‌ ಕೂಡ 109 ರನ್‌ ಬಾರಿಸಿ ಶತಕ ಪೂರ್ತಿಗೊಳಿಸಿದರು. ಪಂತ್‌ ಈ ಶತಕ ಬಾರಿಸುವ ಮೂಲಕ ವಿಕೆಟ್‌ ಕೀಪರ್‌ ಆಗಿ ಭಾರತ ಪರ ಟೆಸ್ಟ್‌ನಲ್ಲಿ ಅತ್ಯಧಿಕ ಶತಕ ಬಾರಿಸಿದ ಧೋನಿ ಅವರ ದಾಖಲೆಯನ್ನು ಸರಿಗಟ್ಟಿದರು. ಧೋನಿ ಕೂಡ 6 ಟೆಸ್ಟ್‌ ಶತಕ ಬಾರಿಸಿದ್ದಾರೆ. ಕಡಿಮೆ ಇನಿಂಗ್ಸ್‌ನಿಂದ ಈ ಸಾಧನೆಗೈದ ಲೆಕ್ಕಾಚಾರದಲ್ಲಿ ಪಂತ್‌ಗೆ ಅಗ್ರಸ್ಥಾನ. ಪಂತ್‌ 58 ಇನಿಂಗ್ಸ್‌ನಲ್ಲಿ ಈ ದಾಖಲೆ ಬರೆದರೆ, ಧೋನಿ 144 ಇನಿಂಗ್ಸ್‌ ಆಡಿದ್ದರು.