ಗೆಲುವಿನ ಕೇಕೆ ಹಾಕಿದ ಕೋಲ್ಕತಾ ನೈಟ್’ರೈಡರ‍್ಸ್‌
ಚೆನ್ನೈ:ಕೋಲ್ಕತ ನೈಟ್‌ರೈಡರ್ಸ್‌ ತಂಡ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಮಣಿಸಿ ಶುಭಾರಂಭ ಕಂಡಿತು.
ಕನ್ನಡಿಗ ಮನೀಷ್ ಪಾಂಡೆ (61*ರನ್) ಹಾಗೂ ಜಾನಿ ಬೇರ್‌ಸ್ಟೋ (55ರನ್) ಪ್ರತಿಹೋರಾಟದ ನಡುವೆಯೂ ಕೆಕೆಆರ್ ತಂಡ 10 ರನ್‌ಗಳಿಂದ ಜಯ ದಾಖಲಿಸಿತು.
ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್, ನಿತೀಶ್ ರಾಣಾ (80 ರನ್) ಹಾಗೂ ರಾಹುಲ್ ತ್ರಿಪಾಠಿ (53 ರನ್) ಜೋಡಿಯ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್‌ಗೆ 187 ರನ್ ಪೇರಿಸಿತು. ಪ್ರತಿಯಾಗಿ ಸನ್‌ರೈಸರ್ಸ್‌ ತಂಡ 5 ವಿಕೆಟ್‌ಗೆ 177 ರನ್ ಪೇರಿಸಲಷ್ಟೇ ಶಕ್ತವಾಯಿತು.
ಕೋಲ್ಕತ ನೈಟ್ ರೈಡರ್ಸ್‌: 6 ವಿಕೆಟ್‌ಗೆ 187(ನಿತೀಶ್ ರಾಣಾ 80, ರಾಹುಲ್ ತ್ರಿಪಾಠಿ 53, ದಿನೇಶ್ ಕಾರ್ತಿಕ್ 22*, ಮೊಹಮದ್ ಶಮಿ 32ಕ್ಕೆ 2, ರಶೀದ್ ಖಾನ್ 24ಕ್ಕೆ 2),
ಸನ್‌ರೈಸರ್ಸ್‌ ಹೈದರಾಬಾದ್: 5 ವಿಕೆಟ್‌ಗೆ 177(ಮನೀಷ್ ಪಾಂಡೆ 61*, ಜಾನಿ ಬೇರ್‌ಸ್ಟೋ 55, ಅಬ್ದುಲ್ ಸಮದ್ 19*, ಪ್ರಸಿದ್ಧ ಕೃಷ್ಣ 35ಕ್ಕೆ 2, ಶಕೀಬ್ ಅಲ್ ಹಸನ್ 34ಕ್ಕೆ 1, ಪ್ಯಾಟ್ ಕಮ್ಮಿಸ್ 30ಕ್ಕೆ 1, ಆಂಡ್ರೆ ರಸೆಲ್ 32ಕ್ಕೆ 1).
ಪಂದ್ಯಶ್ರೇಷ್ಠ:ನಿತೀಶ್ ರಾಣಾ