 : ಬಾಂಗ್ಲಾ ಫೀಲ್ಡಿಂಗ್‌ ಸೆಟ್‌ ಮಾಡಿದ ಪಂತ್‌; ವಿಡಿಯೊ ವೈರಲ್
ಚೆನ್ನೈ:ಬಾಂಗ್ಲಾದೇಶ ವಿರುದ್ದದ ಮೊದಲ ಟೆಸ್ಟ್‌ನಲ್ಲಿ ಶತಕ ಬಾರಿಸಿ ಮಿಂಚಿದ್ದ ಟೀಮ್‌ ಇಂಡಿಯಾದ ಯುವ ಆಟಗಾರ ರಿಷಭ್‌ ಪಂತ್‌( ) ಬ್ಯಾಟಿಂಗ್‌ ವೇಳೆ ಎದುರಾಳಿ ತಂಡದ ಸ್ಥಿತಿ ಕಂಡು ತಾನೇ ಫೀಲ್ಡಿಂಗ್‌ ಸೆಟ್‌ ಮಾಡಿ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ. ಪಂತ್‌ ಫೀಲ್ಡಿಂಗ್‌ ಸೆಟ್‌ ಮಾಡಿದ ವಿಡಿಯೊ ವೈರಲ್‌ ಆಗಿದೆ.
   ’ ,   ’  ’! 😂👂 ,  ! 🫶🏻###../PgEr1DyhmE
ಗಿಲ್‌ ಜತೆ ಮೂರನೇ ದಿನದಾಟದಲ್ಲಿ ಬ್ಯಾಟಿಂಗ್‌ ನಡೆಸುತ್ತಿದ್ದ ಪಂತ್‌ ಓರ್ವ ಫೀಲ್ಡರ್‌ ಇಲ್ಲಿಗೆ ಬೇಕುʼ ಎಂದು ಮಿಡ್‌ವಿಕೆಟ್‌ನತ್ತ ತೋರಿಸಿದರು. ಪಂತ್‌ ಸಲಹೆಯಂತೆ ಬಾಂಗ್ಲಾ ನಾಯಕ ನಜ್ಮುಲ್‌ ಹೊಸೈನ್‌ ಶಾಂಟೊ, ಮಿಟ್‌ ವಿಕೆಟ್‌ಗೆ ಫೀಲ್ಡರ್‌ ಕಳುಹಿಸಿದರು.
ಶುಕ್ರವಾರ 2ನೇ ದಿನದಾಟಕ್ಕೆ 12ರನ್‌ ಗಳಿಸಿದ್ದ ಪಂತ್‌ ಮೂರನೇ ದಿನವಾದ ಶನಿವಾರ ಬಿರುಸಿನ ಬ್ಯಾಟಿಂಗ್‌ ಮೂಲಕ ಆಕರ್ಷಕ ಶತಕ ಬಾರಿಸಿ ಸಂಭ್ರಮಿಸಿದರು. ಶುಭಮನ್‌ ಗಿಲ್‌ ಜತೆ ಬ್ಯಾಟಿಂಗ್‌ ಪೈಪೋಟಿಗೆ ಇಳಿದ ಪಂತ್‌ ರನ್‌ ಗಳಿಕೆಯಲ್ಲಿ ತನಗಿಂತ ಮುಂದಿದ್ದ ಗಿಲ್‌ ಅವರನ್ನು ಹಿಂದಿಕ್ಕಿ ಶತಕ ಪೂರ್ತಿಗೊಳಿಸಿದರು. 72 ರನ್‌ ಗಳಿಸಿದ್ದ ವೇಳೆ ಬಾಂಗ್ಲಾ ನಾಯಕ ನಜ್ಮುಲ್ ಹೊಸೈನ್ ಶಾಂತೋ ಅವರಿಂದ ಕ್ಯಾಚ್‌ ಕೈಚೆಲ್ಲಿ ಜೀವದಾನ ಪಡೆದ ಪಂತ್‌ ಸಿಕ್ಕ ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡರು. 128 ಎಸೆತ ಎದುರಿಸಿದ ಪಂತ್‌ 13 ಬೌಂಡರಿ ಮತ್ತು 4 ಸಿಕ್ಸರ್‌ ಸಿಡಿಸಿ 109 ರನ್‌ ಬಾರಿಸಿದರು.‌
ಇದನ್ನೂ ಓದಿ   : ಗಿಲ್, ಪಂತ್ ಶತಕ, ಗೆಲುವಿನ ಹಾದಿಯಲ್ಲಿ ಭಾರತ
    ,  ! 🙌🏻💯####../C4gJuv29Y1
ಪಂತ್‌ ಈ ಶತಕ ಬಾರಿಸುವ ಮೂಲಕ ವಿಕೆಟ್‌ ಕೀಪರ್‌ ಆಗಿ ಭಾರತ ಪರ ಟೆಸ್ಟ್‌ನಲ್ಲಿ ಅತ್ಯಧಿಕ ಶತಕ ಬಾರಿಸಿದ ಧೋನಿ ಅವರ ದಾಖಲೆಯನ್ನು ಸರಿಗಟ್ಟಿದರು. ಧೋನಿ ಕೂಡ 6 ಟೆಸ್ಟ್‌ ಶತಕ ಬಾರಿಸಿದ್ದಾರೆ. ಕಡಿಮೆ ಇನಿಂಗ್ಸ್‌ನಿಂದ ಈ ಸಾಧನೆಗೈದ ಲೆಕ್ಕಾಚಾರದಲ್ಲಿ ಪಂತ್‌ಗೆ ಅಗ್ರಸ್ಥಾನ. ಪಂತ್‌ 58 ಇನಿಂಗ್ಸ್‌ನಲ್ಲಿ ಈ ದಾಖಲೆ ಬರೆದರೆ, ಧೋನಿ 144 ಇನಿಂಗ್ಸ್‌ ಆಡಿದ್ದರು.
ಗಂಗೂಲಿ ದಾಖಲೆ ಮುರಿದ ಪಂತ್‌
ರಿಷಭ್‌ ಪಂತ್‌( ) 3 ಸಿಕ್ಸರ್‌ ಬಾರಿಸುವ ಮೂಲಕ ಮಾಜಿ ದಿಗ್ಗಜ ಆಟಗಾರ ಸೌರವ್‌ ಗಂಗೂಲಿ( ) ಅವರ ದಾಖಲೆಯೊಂದನ್ನು ಮುರಿದಿದ್ದಾರೆ. ಭಾರತ ಪರ ಟೆಸ್ಟ್‌ನಲ್ಲಿ ಅತ್ಯಧಿಕ ಸಿಕ್ಸರ್‌ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 7ನೇ ಸ್ಥಾನಕ್ಕೇರುವ ಮೂಲಕ ಗಂಗೂಲಿಯನ್ನು ಹಿಂದಿಕ್ಕಿದ್ದಾರೆ. ಗಂಗೂಲಿ57ಸಿಕ್ಸರ್‌ ಬಾರಿಸಿ ಏಳನೇ ಸ್ಥಾನಿಯಾಗಿದ್ದರು. ಇದೀಗ ಪಂತ್‌59ಸಿಕ್ಸರ್‌ ಬಾರಿಸಿದ್ದಾರೆ.