  : 92 ವರ್ಷಗಳ ಬಳಿಕ ಗೆಲುವಿನಲ್ಲಿ ದಾಖಲೆ ಬರೆದ ಭಾರತ
ಚೆನ್ನೈ:ಪ್ರವಾಸಿ ಬಾಂಗ್ಲಾದೇಶ(  ) ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಭಾರತ 280 ರನ್‌ಗಳ ಗೆಲುವು ಸಾಧಿಸಿ ಮೆರೆದಾಡಿದೆ. ಭಾರತ ತಂಡ ಈ ಗೆಲುವಿನೊಂದಿಗೆ ವಿಶೇಷ ದಾಖಲೆಯನ್ನು ನಿರ್ಮಿಸಿದೆ. 92 ವರ್ಷಗಳ ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ, ಸೋಲುಗಳಿಗಿಂತ ಹೆಚ್ಚಿನ ಗೆಲುವುಗಳನ್ನು ಹೊಂದಿದ ಸಾಧನೆ ಮಾಡಿತು.
1932ರಲ್ಲಿ ಟೆಸ್ಟ್‌ ಮಾನ್ಯತೆ ಪಡೆದಂದಿನಿಂದಲೂ ಭಾರತದ(  ) ಸೋಲಿನ ಸಂಖ್ಯೆ ಗೆಲುವಿಗಿಂತ ಜಾಸ್ತಿಯೇ ಇತ್ತು. ಒಮ್ಮೆಯೂ ಗೆಲುವು ಸೋಲಿನ ಗಡಿಯನ್ನು ದಾಟಿರಲಿಲ್ಲ. ಇದೀಗ ಮೊದಲ ಬಾರಿ ಸೋಲಿನ ಸಂಖ್ಯೆಯನ್ನು ಹಿಂದಿಕ್ಕಿ ಗೆಲುವಿನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಭಾರತ ಇದುವರೆಗೂ ಒಟ್ಟು 580 ಟೆಸ್ಟ್‌ ಪಂದ್ಯಗಳನ್ನು ಆಡಿ, 178* ಸೋಲು ಮತ್ತು 179* ಗೆಲುವು ಸಾಧಿಸಿದೆ. 222 ಪಂದ್ಯ ಡ್ರಾ ಗೊಂಡರೆ, ಒಂದು ಪಂದ್ಯ ಟೈ ಗೊಂಡಿದೆ.
ಭಾರತ ತಂಡ ಮೊತ್ತ ಮೊದಲ ಬಾರಿಗೆ ಟೆಸ್ಟ್‌ ಪಂದ್ಯ ಆಡಿದ್ದು 1932ರಲ್ಲಿ. ಇಂಗ್ಲೆಂಡ್‌ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯ ಇದಾಗಿತ್ತು. ಈ ಪಂದ್ಯದಲ್ಲಿ ಭಾರತ ಸೋಲು ಕಂಡಿತ್ತು. ವಿಶೇಷ ಎಂದರೆ ಭಾರತ ಮೊದಲ ಟೆಸ್ಟ್‌ ಪಂದ್ಯ ಗೆಲುವು ಸಾಧಿಸಿದ್ದೂ ಕೂಡ ಇಂಗ್ಲೆಂಡ್‌ ವಿರುದ್ಧವೇ. 1951/52 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 1 ಗೆಲುವು ಸಾಧಿಸಿತ್ತು. ಸರಣಿ 1-1 ಅಂತರದಿಂದ ಡ್ರಾ ಗೊಂಡಿತ್ತು. ಭಾರತ ತಂಡ ಚೊಚ್ಚಲ ಟೆಸ್ಟ್‌ ಸರಣಿ ಗೆದ್ದಿದ್ದು ಸಾಂಪ್ರದಾಯಿಕ ಬುದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ. 1952/53 ರಲ್ಲಿ ತವರಿನಲ್ಲಿ ನಡೆದ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 2-1 ಅಂತರದಿಂದ ಗೆದ್ದು ಬೀಗಿತ್ತು.
       ' - !   @ashwinravi99’         -    . 🤩@@        …../9UDLhXDBoV
ಚೆನ್ನೈಯ ಚೆಪಾಕ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಗೆಲುವಿಗೆ 515 ರನ್‌ ಗುರಿ ಪಡೆದಿದ್ದ ಬಾಂಗ್ಲಾದೇಶ ತಂಡವು ನಾಲ್ಕನೇ ದಿನ 234 ರನ್‌ ಗಳಿಗೆ ಆಲೌಟಾಗಿ ಸೋಲು ಕಂಡಿತು. ಭಾರತದ ಈ ಗೆಲುವು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪ್ರವೇಶಿಸುವಲ್ಲಿ ಮತ್ತಷ್ಟು ಸಹಕಾರಿಯಾಗಿದೆ. ಗುರುವಾರ ಆರಂಭಗೊಂಡಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 376 ರನ್‌ ಬಾರಿಸಿತ್ತು. ಜವಾಬಿತ್ತ ಬಾಂಗ್ಲಾದೇಶ ಕೇವಲ 149 ರನ್‌ಗೆ ಸರ್ವಪತನ ಕಂಡಿತ್ತು. ಫಾಲೋಆನ್‌ ಹೇರದ ಭಾರತ ದ್ವಿತೀಯ ಇನಿಂಗ್ಸ್‌ ಬ್ಯಾಟಿಂಗ್‌ ನಡೆಸಿ 4 ವಿಕೆಟ್‌ಗೆ  287 ರನ್‌ ಬಾರಿಸಿ ಡಿಕ್ಲೇರ್‌ ಘೋಷಿಸಿತು. ಬಾಂಗ್ಲಾ ದ್ವಿತೀಯ ಇನಿಂಗ್ಸ್‌ನಲ್ಲಿ 234 ರನ್‌ ಬಾರಿಸಲಷ್ಟೇ ಶಕ್ತವಾಯಿತು.
ಇದನ್ನೂ ಓದಿ  : ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು; ಅಶ್ವಿನ್‌ ಶ್ರೇಷ್ಠ ಪ್ರದರ್ಶನ
  2⃣8⃣0⃣    1st    🙌#  1⃣-0⃣     👏👏 ▶️://./jV4wK7BOKA#|@../wVzxMf0TtV
ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಅಶ್ವಿನ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮೊದಲ ಇನಿಂಗ್ಸ್‌ನಲ್ಲಿ ಅಶ್ವಿನ್‌ ವಿಕೆಟ್‌ ಲೆಸ್‌ ಎನಿಸಿಕೊಂಡರೂ ದ್ವಿತೀಯ ಇನಿಂಗ್ಸ್‌ನಲ್ಲಿ 6 ವಿಕೆಟ್‌ ಕಿತ್ತು ಮಿಂಚಿದರು. ಮೊದಲ ಇನಿಂಗ್ಸ್‌ನಲ್ಲಿ 113 ರನ್‌ ಬಾರಿಸಿ ಕುಸಿದ ಭಾರತ ತಂಡಕ್ಕೆ ನೆರವಾಗಿದ್ದರು.