ಪುರುಷರ 10 ಮೀಟರ್ ಏರ್ ಪಿಸ್ತೂಲ್: ಕಂಚು ಗೆದ್ದ ಸಿಂಗರಾಜ್ ಅಧಾನ್
ಟೋಕಿಯೊ:ಪಾರಾಲಂಪಿಕ್ಸ್ ನಲ್ಲಿ ಭಾರತದ ಪದಕ ಬೇಟೆ 8ಕ್ಕೆ ತಲುಪಿದೆ. ಮಂಗಳವಾರ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಎಸ್ ಎಚ್ 1 ಪಂದ್ಯದಲ್ಲಿ ಭಾರತದ ಶೂಟರ್ ಸಿಂಗರಾಜ್ ಅಧಾನ್ ಕಂಚಿನ ಪದಕ ಗೆದ್ದಿದ್ದಾರೆ.
ಪ್ಯಾರಾಲಂಪಿಕ್ಸ್ ನ ಪಂದ್ಯಾವಳಿ 8ನೇ ದಿನಕ್ಕೆ ತಲುಪಿದ್ದು, ಸಿಂಗರಾಜ್ ಕಂಚಿನ ಪದಕವನ್ನು ಪುರುಷರ 10 ಮೀಟರ್ ಏರ್ ಪಿಸ್ತೂಲ್ ನಲ್ಲಿ ಗೆದ್ದುಕೊಂಡಿದ್ದಾರೆ. ಚೀನಾ ದೇಶದ ಹೌಂಗ್ ಕ್ಸಿಂಗ್ ಮತ್ತು ಯಾಂಗ್ ಚಾವ್ ಅವರು ಬೆಳ್ಳಿ ಮತ್ತು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. 216.8 ಅಂಕಗಳೊಂದಿಗೆ ಸಿಂಗ್ ರಾಜ್ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಭಾರತದ ಪ್ರತಿಭಾವಂತ ಶೂಟರ್ ದೇಶಕ್ಕೆ ಕಂಚಿನ ಪದಕವನ್ನು ತಂದು ಕೀರ್ತಿ ತಂದಿದ್ದಾರೆ. ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
