ಐಪಿಎಲ್’ಗೆ ಇನ್ನೆರಡು ಹೊಸ ತಂಡಗಳ ಘೋಷಣೆ
ದುಬೈ:ಅಕ್ಟೋಬರ್ 25ರಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ಇನ್ನೆರಡು ಹೊಸ ತಂಡಗಳ ಘೋಷಣೆಯಾಗಲಿದೆ ಎಂದು ಬಿಸಿಸಿಐ ತಿಳಿಸಿದೆ.
ಎರಡು ಹೊಸ ತಂಡಗಳ ಘೋಷಣೆಯ ಬಳಿಕ 2023ರಿಂದ 2027ರ ಅವಧಿಯ ವರೆಗಿನ ಐಪಿಎಲ್ ಮಾಧ್ಯಮ ಹಕ್ಕುಗಳ ಟೆಂಡರ್‌ ಕರೆಯಲಾಗುವುದು ಎಂದು ಬಿಸಿಸಿಐ ತಿಳಿಸಿದೆ. ಸೋನಿ ಹಾಗೂ ಝೀ ಇತ್ತೀಚೆಗೆ ವಿಲೀನವಾಗಿದ್ದು, ಸ್ಟಾರ್ ಸ್ಪೋರ್ಟ್ಸ್ ಜೊತೆಗೆ ಬಿಡ್ ಸಲ್ಲಿಸುವ ಸಾಧ್ಯತೆ ಯಿದೆ.
ಐಪಿಎಲ್‌ಗೆ ಎರಡು ತಂಡಗಳ ಸೇರ್ಪಡೆಯೊಂದಿಗೆ ಒಟ್ಟು ತಂಡಗಳ ಸಂಖ್ಯೆ 10ಕ್ಕೆ ಏರಿಕೆಯಾಗಲಿದೆ. ಗುಜರಾತ್‌ನ ಅಹಮದಾಬಾದ್ ಕೇಂದ್ರಿತವಾಗಿ ಒಂದು ತಂಡ ಘೋಷಣೆಯಾಗುವ ಸಾಧ್ಯತೆಯಿದೆ.
ಉತ್ತರ ಪ್ರದೇಶದ ಲಖನೌ ಸೇರಿದಂತೆ ನಾಗ್ಪುರ, ರಾಯ್‌ಪುರ, ಪುಣೆ, ವಿಶಾಖಪಟ್ಟಣ ಹಾಗೂ ರಾಂಚಿ ನಗರಗಳು ರೇಸ್‌ನಲ್ಲಿವೆ.