ಎರಡನೇ ಅಲೆಯ ತೀವ್ರತೆ ಇಳಿಕೆ: 18,166 ಮಂದಿಗೆ ಕರೋನಾ ಸೋಂಕು
ನವದೆಹಲಿ:ಕಳೆದ 24 ಗಂಟೆಗಳಲ್ಲಿ 18 ಸಾವಿರದ 166 ಮಂದಿಗೆ ಸೋಂಕು ತಗಲಿದ್ದರೆ 214 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ತೀವ್ರತೆ ಇಳಿಕೆಯಾಗುತ್ತಿದ್ದರೂ, ಸಂಪೂರ್ಣವಾಗಿ ತಗ್ಗಿಲ್ಲ.
2020ರ ಮಾರ್ಚ್ ತಿಂಗಳಲ್ಲಿ ದಾಖಲಾದ ಪ್ರಮಾಣಕ್ಕಿಂತ ಕಡಿಮೆ ಎನ್ನಲಾಗಿದೆ. ದೇಶದಲ್ಲಿ 2 ಲಕ್ಷದ 30 ಸಾವಿರದ 971 ಸಕ್ರಿಯ ಪ್ರಕರಣಗಳಿದ್ದು, ಕಳೆದ 208 ದಿನಗಳಲ್ಲಿ ಅತ್ಯಂತ ಕಡಿಮೆಯಾಗಿದೆ. ಒಟ್ಟಾರೆ, ಇದುವರೆಗೆ 3 ಕೋಟಿಯ 32 ಲಕ್ಷದ 71 ಸಾವಿರದ 915 ಮಂದಿ ಗುಣಮುಖರಾಗಿದ್ದಾರೆ.
ದೇಶದಲ್ಲಿ 94 ಕೋಟಿಯ 70 ಲಕ್ಷದ 10 ಸಾವಿರದ 175 ಮಂದಿಗೆ ಕರೋನಾ ಲಸಿಕೆ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 66.85 ಲಕ್ಷಕ್ಕೂ ಅಧಿಕ ಮಂದಿಗೆ ನೀಡಲಾಗಿದೆ.