ಸೋತರೂ ಅಫ್ಘಾನಿಸ್ತಾನ್ ವೀರೋಚಿತ ಹೋರಾಟ: ರಶೀದ್ ಮೈಲಿಗಲ್ಲು
ರಷೀದ್ ಖಾನ್ ಟಿ20 ಕ್ರಿಕೆಟ್​ನಲ್ಲಿ ಸರಿಸಾಟಿ ಇಲ್ಲದ ಬೌಲರ್. ತಮ್ಮ 100 ವಿಕೆಟ್​ಗಳನ್ನ ಇವರು 12 ರನ್ ಸರಾಸರಿಯಂತೆ ಪಡೆದುಕೊಂಡಿದ್ಧಾರೆ. ಇವರ ಬೌಲಿಂಗ್ ಎಕನಾಮಿ, ಅಂದರೆ ಪ್ರತೀ ಓವರ್​ಗೆ ನೀಡಿರುವ ಸರಾಸರಿ ರನ್ ಕೇವಲ 6 ರನ್​ಗಿಂತ ತುಸು ಹೆಚ್ಚು ಅಷ್ಟೇ.
ರಷೀದ್ ಖಾನ್ 17ನೇ ವಯಸ್ಸಿಗೆ ಅಫ್ಘಾನಿಸ್ತಾನ ತಂಡದಲ್ಲಿ ಸ್ಥಾನ ಪಡೆದಿದ್ದವರು. ವಿಶ್ವದ ವಿವಿಧ ದೇಶಗಳಲ್ಲಿರುವ ಟ್ವೆಂಟಿ20 ಟೂರ್ನಿಗಳಲ್ಲಿ ರಷೀದ್ ಖಾನ್ ಅವರಿಗೆ ಬಹಳ ಬೇಡಿಕೆ ಇದೆ. ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡದಲ್ಲಿ ನಾಲ್ಕು ಸೀಸನ್ ಆಡಿದ್ದಾರೆ. ಇಂಗ್ಲೆಂಡ್, ಪಾಕಿಸ್ತಾನ್, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಸೌತ್ ಆಫ್ರಿಕಾದ ಟ್ವೆಂಟಿ20 ಟೂರ್ನಿಗಳಲ್ಲಿ ರಷೀದ್ ಖಾನ್ ಅವರು ಆಡುತ್ತಾ ಬಂದಿದ್ಧಾರೆ.
ವಿಶ್ವಕಪ್​ಗೆ ಮುನ್ನ ಇಲ್ಲಿ ಐಪಿಎಲ್​ನಲ್ಲಿ ಆಡಿದ್ದ ರಷೀದ್ ಖಾನ್, ದಿನಗಳೆದಂತೆ ಇಲ್ಲಿನ ಪಿಚ್​​ಗಳು ನಿಧಾನಗೊಳ್ಳುತ್ತಾ ಹೋಗುತ್ತವೆ. ತಮ್ಮ ಬೌಲಿಂಗ್ ಶೈಲಿಗೆ ಇವು ಸಹಕಾರಿ ಆಗುತ್ತವೆ ಎಂದು ಹೇಳಿಕೊಂಡಿದ್ದರು.