ಐಸಿಸಿಯ ಪುರುಷರ ಕ್ರಿಕೆಟ್‌ ಸಮಿತಿ ಅಧ್ಯಕ್ಷರಾಗಿ ಗಂಗೂಲಿ ನೇಮಕ
ದುಬೈ :ಐಸಿಸಿಯ ಪುರುಷರ ಕ್ರಿಕೆಟ್‌ ಸಮಿತಿ ಅಧ್ಯಕ್ಷರಾಗಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್‌ ಗಂಗೂಲಿ ನೇಮಕಗೊಂಡಿದ್ದಾರೆ ಎಂದು ಐಸಿಸಿ ತಿಳಿಸಿದೆ.
ಭಾರತದವರೇ ಆದ ಅನಿಲ್‌ ಕುಂಬ್ಳೆ ಅವರ ಸ್ಥಾನಕ್ಕೆ ಗಂಗೂಲಿ ನೇಮಕಗೊಂಡಿದ್ದಾರೆ ಎಂದು ತಿಳಿಸಿದೆ. ಅನಿಲ್‌ ಕುಂಬ್ಳೆ ಅವರು ಮೂರು ವರ್ಷಗಳ ಗರಿಷ್ಠ ಮೂರು ಅವಧಿಯನ್ನ ಪೂರೈಸಿದ್ದಾರೆ.
ಆಡಳಿತಗಾರರಾಗಿ ಗಂಗೂಲಿ ಹೊಂದಿರುವ ಅನುಭವ ಕ್ರಿಕೆಟ್‌ಗೆ ಸಂಬಂಧಿಸಿದ ಉತ್ತಮ ನಿರ್ಧಾರಗಳನ್ನ ತೆಗೆದುಕೊಳ್ಳುವಲ್ಲಿ ನೆರವಾಗಲಿದೆ. ಐಸಿಸಿಯ ಪುರುಷರ ಕ್ರಿಕೆಟ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸ್ವಾಗತಿಸಲು ಸಂತಸ ಎನಿಸುತ್ತಿದೆ’ ಎಂದು ಐಸಿಸಿ ಚೇರ್ಮನ್‌ ಗ್ರೆಗ್‌ ತಿಳಿಸಿದ್ದಾರೆ.