ಅಯ್ಯರ್‌’ಗೆ ಶತಕದ ಶ್ರೇಯ, ಜಡೇಜಾ ಅರ್ಧಶತಕ
ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ನಡುವಣ ಮೊದಲ ಟೆಸ್ಟ್ ಪಂದ್ಯ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಿತು. ಶ್ರೇಯಸ್ ಅಯ್ಯರ್ ಹಾಗೂ ರವೀಂದ್ರ ಜಡೇಜಾ ಅವರ ಜೊತೆಯಾಟದ ನೆರವಿನಿಂದ ಭಾರತ ಉತ್ತಮ ಮೊತ್ತ ಸಂಪಾದಿಸಿತು. ಮೊದಲ ದಿನದಾಟದ ಅಂತ್ಯಕ್ಕೆ ನಾಲ್ಕು ವಿಕೆಟ್‌ ಕಳೆದುಕೊಂಡು 258 ರನ್‌ ಗಳಿಸಿದ್ದ ಭಾರತ ಈಗ ಎರಡನೇ ದಿನದಾಟದಲ್ಲಿ ಬೇಗನೆ ವಿಕೆಟ್ ಕಳೆದುಕೊಂಡಿದೆ. ಶ್ರೇಯಸ್ ಅಯ್ಯರ್ ಚೊಚ್ಚಲ ಶತಕ ಸಿಡಿಸಿ ಔಟ್ ಆಗಿದ್ದಾರೆ.
ಭಾರತ ಮೊದಲ ಇನ್ನಿಂಗ್ಸ್ 326/8)
(ಶ್ರೇಯಸ್ ಅಯ್ಯರ್ ಅಜೇಯ 105, ರವೀಂದ್ರ ಜಡೇಜಾ ಅಜೇಯ 50, ಶುಬ್ಮನ್ ಗಿಲ್ 52, ಅಜಿಂಕ್ಯ ರಹಾನೆ 35, ಚೇತೇಶ್ವರ್ ಪೂಜಾರ 26 ರನ್- ಕೈಲೆ ಜೇಮಿಸನ್ 77/3)
