ಟಿ20 ಪಂದ್ಯಗಳ ಮುಂದೂಡಿಕೆ: ಬಿಸಿಸಿಐ
ನವದೆಹಲಿ :ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಟೀಂ ಇಂಡಿಯಾ ಮೂರು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಆದರೆ ಟಿ20 ಪಂದ್ಯಗಳನ್ನು ಮುಂದೂಡುತ್ತಿರುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜೇ ಶಾ ಶನಿವಾರ ಘೋಷಿಸಿದ್ದಾರೆ.
ಭಾರತ ತಂಡವು ಮೂರು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳಿಗೆ ಪ್ರಯಾಣಿಸುತ್ತದೆ ಎಂದು ಬಿಸಿಸಿಐ ದೃಢಪಡಿಸಿದೆ. ಉಳಿದ ನಾಲ್ಕು ಟಿ20 ಪಂದ್ಯಗಳನ್ನು ನಂತರದ ದಿನಗಳಲ್ಲಿ ಆಡಲಾಗುವುದು ಎಂಬುದಾಗಿ ತಿಳಿಸಿದ್ದಾರೆ.